

ಹುನಗುಂದ: ತಾಲೂಕಿನ ಹಾವರಗಿ ಗ್ರಾಮದ ಎಸ್‌ಎಂಎಸ್ ಪ್ರೌಢಶಾಲೆ ಆವರಣದಲ್ಲಿ ಜೂ.23 ರಂದು ಬೆಳಿಗ್ಗೆ 10.30 ಗಂಟೆಗೆ ಎಸ್. ಆರ್.ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನದ ಸಹಯೋಗದಲ್ಲಿ ಮಾಜಿ ಸಚಿವ ಎಸ್. ಆರ್.ಕಾಶಪ್ಪನವರ 23ನೇ ಪುಣ್ಯಸ್ಮರಣೆ ನಡೆಯಲಿದೆ ಎಂದು ಎಸ್. ಆರ್. ಕಾಶಪ್ಪನವರ ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಶಿರೂರ ಹೇಳಿದರು.
ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಗದ್ಗುರುಗಳಾದ ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯರು, ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಕೇದಾರ ಪೀಠದ ಭೀಮಾಶಂಕರ ಶಿವಾಚಾರ್ಯರು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು, ಕಾಶಿ ಪೀಠದ ನೂತನ ಪೀಠಾಧೀಶ್ವರಾದ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ದಿಂಡವಾರ ಕುಮಾರಲಿಂಗ ಸ್ವಾಮೀಜಿ, ಹಡಗಲಿ-ನಿಡಗುಂದಿ ರುದ್ರಮುನಿ ಸ್ವಾಮೀಜಿ, ಬಿಲ್ ಕೆರೂರ ಸಿದ್ದಲಿಂಗ ಸ್ವಾಮೀಜಿ, ನಂದವಾಡಗಿ-ಆಳಂದ ಮಹಾಂತಲಿಂಗ ಸ್ವಾಮೀಜಿ, ಗಿರಿಸಾಗರ ರುದ್ರಮುನಿ ಸ್ವಾಮೀಜಿ ಸೇರಿ ವಿವಿಧ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ ಅಧ್ಯಕ್ಷತೆ ವಹಿಸುವರು. ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಗೌರವ ಉಪಸ್ಥಿತರಿರುವರು. ಎಸ್. ಆರ್. ಕಾಶಪ್ಪನವರ ಪ್ರತಿಷ್ಠಾನದ ಖಜಾಂಚಿ ದೇವಾನಂದ ಕಾಶಪ್ಪನವರ, ವಕೀಲ ಸಿ.ವಿ. ಕೋಟಿ, ಎಸ್. ಆರ್. ಕಾಶಪ್ಪನವರ ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಶಿರೂರ ಉಪಸ್ಥಿತರಿರುವರು ಎಂದು ಅವರು ಮಾಹಿತಿ ನೀಡಿದರು.
ಪತ್ರಿಷ್ಠಾನದ ಸದಸ್ಯರಾದ ಶಿವಾನಂದ ಕಂಠಿ, ಸಂಗಣ್ಣ ಗಂಜಿಹಾಳ, ಶೇಖರಪ್ಪ ಬಾದವಾಡಗಿ, ಸಿದ್ದಪ್ಪ ಹೊಸೂರು, ಎಸ್. ಕೆ. ಕೊನೆಸಾಗರ, ಮುತ್ತಣ್ಣ ಕಲಗೋಡಿ, ಅಮರೇಶ ನಾಗೂರ, ಸಿದ್ದು ಭದ್ರಶೆಟ್ಟಿ ಉಪಸ್ಥಿತರಿದ್ದರು.