

ಕಲಬುರಗಿ: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಹಲವರನ್ನು ಪೊಲೀಸರು ಇದಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಇನ್ನೂ ಕೆಲವರನ್ನು ವಿಚಾರಣೆ ಮಾಡುತ್ತಲಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿದ್ದು, ಈ ಘಟನೆ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ.
ಘಟಾನುಘಟಿಗಳ ಹೆಸರು ಈ ಅಕ್ರಮದಲ್ಲಿ ಕೇಳಿಬರುತ್ತಿವೆಯಾದರೂ ಸದ್ಯ ಬಂಧನಕ್ಕೆ ಒಳಗಾದವರು ಇವರಿಷ್ಟು ಮಂದಿ. ಅವರ ಹೆಸರು ಹಾಗೂ ವಿವರ ಇಲ್ಲಿದೆ ನೋಡಿ:
1. ಆರ್ ಡಿ ಪಾಟೀಲ್ ಕಿಂಗ್‌ಪಿನ್
2. ಮಹಾಂತೇಶ್ ಪಾಟೀಲ್ ಕಿಂಗ್‌ಪಿನ್
3. ದಿವ್ಯಾ ಹಾಗರಗಿ ಜ್ಞಾನಜ್ಯೋತಿ ಶಾಲೆಯ ಒಡತಿ, ಬಿಜೆಪಿ ಮಾಜಿ ನಾಯಕಿ
4. ರಾಜೇಶ್ ಹಾಗರಗಿ ದಿವ್ಯಾ ಪತಿ ಹಾಗು ಜ್ಞಾನ ಜ್ಯೋತಿ ಶಾಲೆಯ ಅಧ್ಯಕ್ಷ
5. ವಿರೇಶ್ ಅಭ್ಯರ್ಥಿ
6. ಹಯ್ಯಾಳಿ ದೇಸಾಯಿ ಅಭ್ಯರ್ಥಿ
7. ವಿಶಾಲ್ ಅಭ್ಯರ್ಥಿ
8. ಎನ್ ವಿ ಸುನೀಲ್ ಅಭ್ಯರ್ಥಿ
9. ಪ್ರವೀಣ್ ಅಭ್ಯರ್ಥಿ
10. ಅರುಣ್ ಅಭ್ಯರ್ಥಿ
11. ಚೇತನ್ ನಂದಗಾಂವ್ ಅಭ್ಯರ್ಥಿ
12. ಅರ್ಚನಾ ಜ್ಞಾನ ಜ್ಯೋತಿ ಶಾಲೆ ಶಿಕ್ಷಕಿ
13. ಸುನೀತಾ ಜ್ಞಾನ ಜ್ಯೋತಿ ಶಾಲೆ ಶಿಕ್ಷಕಿ
14. ಮಲ್ಲಿಕಾರ್ಜುನ ಪಾಟೀಲ್ ಬಿದನೂರ್ ಸಹಾಯ ಮಾಡಿದವನು
15. ರುದ್ರಗೌಡ ಪಾಟೀಲ್ ಸಿಎಆರ್ ಪೇದೆ ಹಾಗು ಮಧ್ಯವರ್ತಿ
16. ಶರಣಬಸಪ್ಪ ಅಭ್ಯರ್ಥಿಗಳಿಗೆ ಸಹಾಯ ಮಾಡಿದವನು
17. ಜ್ಯೋತಿ ಪಾಟೀಲ್ ಮಧ್ಯವರ್ತಿ
18. ಸುಮಾ ಪರೀಕ್ಷಾ ಮೇಲ್ವಿಚಾರಕಿ
19. ಸಿದ್ದಮ್ಮ ಪರೀಕ್ಷಾ ಮೇಲ್ವಿಚಾರಕಿ
20. ಸಾವಿತ್ರಿ ಪರಿಕ್ಷಾ ಮೇಲ್ವಿಚಾರಕಿ
21. ಸುರೇಶ್ ಕಾಟೆಗಾಂವ್ ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದವನು
22. ಕಾಳಿದಾಸ ಸುರೇಶ್ ಕಾಟೇಗಾಂವ್ ಸಹಚರ ದಿವ್ಯಾಗೆ ಸಹಾಯ ಮಾಡಿದವನು
23. ಸದ್ದಾಂ ಹುಸೇನ್ ದಿವ್ಯಾ ಹಾಗರಗಿ ಕಾರು ಚಾಲಕ
24. ಮಂಜುನಾಥ್ ಮೇಳಕುಂದಿ ಇಂಜಿನಿಯರ್, ಓಎಂಆರ್ ತಿದ್ದುಪಡಿ ಕಿಂಗ್ ಪಿನ್.
25. ಶ್ರೀಧರ್ ಪವಾರ್, ಅಭ್ಯರ್ಥಿ, ಓಎಂ ಆರ್ ಶೀಟ್ ಬಹಿರಂಗ ಮಾಡಿದಾತ.
26.ಕಾಶೀನಾಥ್, ಮುಖ್ಯೋಪಾಧ್ಯಾಯ, ಜ್ಞಾನ ಜ್ಯೋತಿ ಸ್ಕೂಲ್ ಸರೆಂಡರ್.
27. ಚಂದ್ರಕಾಂತ್ ಕುಲಕರ್ಣಿ, ಆರ್ ಡಿ ಪಾಟೀಲ್ ಆಡಿಟರ್.
28. ಪ್ರಭು ಅಭ್ಯರ್ಥಿ * MSI ಪರೀಕ್ಷೆ ಕೇಂದ್ರ*
29. ಶರಣಪ್ಪ * ಅಭ್ಯರ್ಥಿ ಪ್ರಭು ತಂದೆ*