ಪಿಎಸ್​ಐ ಪರೀಕ್ಷೆ: ಗೋಲ್​ಮಾಲ್​ ದಂಪತಿ ಜೈಲಲ್ಲಿ ಭೇಟಿ- ಕಣ್ಣೀರ ಧಾರೆ, ಸಿಂಗಲ್​ ಸೆಲ್​ ಬೇಡ ಎಂದು ಅವಲತ್ತು

divya1
Published on

ಕಲಬುರಗಿ: ಪಿಎಸ್​ಐ ಪರೀಕ್ಷೆಯಲ್ಲಿ ಕೋಟ್ಯಂತರ ರೂಪಾಯಿಗಳ ಗೋಲ್​ಮಾಲ್​ ಮಾಡಿ ಜೈಲು ಪಾಲಾಗಿರುವ ಕಿಂಗ್​ಪಿನ್​ ಬಿಜೆಪಿ ಮುಖಂಡೆ ದಂಪತಿ ದಿವ್ಯಾ ಹಾಗರಗಿ ಹಾಗೂ ರಾಜೇಶ್​ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಗಳಗಳನೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಿವ್ಯಾ ಅವರ ಸಿಐಡಿ ಕಸ್ಟಡಿ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಈ ನಡುವೆಯೇ ಗೋಲ್​ಮಾಲ್​ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತರಾಗಿರುವ ಅವರ ಪತಿ ರಾಜೇಶ್​ ಕೂಡ ಇದೇ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿ ದಂಪತಿ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಪರಸ್ಪರ ನೋಡಿಕೊಂಡು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ದಿವ್ಯಾ ಅವರನ್ನು ಮಹಿಳೆಯರ ಸೆಲ್​ನಲ್ಲಿ ಇರಿಸಲು ಮುಂದಾದಾಗ, ಅವರು ಅದಕ್ಕೆ ವಿರೋಧಿಸಿ ಪ್ರಕರಣದ ಆರೋಪಿಗಳಾಗಿರುವ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್ ನಲ್ಲಿ ಹಾಕುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿಗೆ ಪೊಲೀಸರು ಒಪ್ಪದೇ ಸಿಂಗಲ್ ಸೆಲ್​ನಲ್ಲಿ ಇರಿಸಿದ್ದಾರೆ, ಜತೆಗೆ ಇತರ ಕೈದಿಗಳಿಗೆ ಸಿಲುವ ಸೌಲಭ್ಯವನ್ನೇ ಇವರಿಗೂ ಕೊಡುವುದಾಗಿ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net