ಅಪ್ಪು ಫೋಟೋ ಪಕ್ಕ ಹಾರಿಬಂದು ಕುಳಿತ ಪಾರಿವಾಳ: ಶಿವಮೊಗ್ಗದಲ್ಲೊಂದು ಅಚ್ಚರಿ, ಅಭಿಮಾನಿಗಳು ಭಾವುಕ

1199711
Published on

ಶಿವಮೊಗ್ಗ: ತಂದೆ ಡಾ.ರಾಜ್‌ಕುಮಾರ್‌ ಅವರಂತೆಯೇ ಪುನೀತ್‌ ಕೂಡ ಹೆಗಲ ಮೇಲೆ ಪಾರಿವಾಳ ಇಟ್ಟುಕೊಂಡಿರುವ ಫೋಟೋ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅಪ್ಪು ಎಂದಾಕ್ಷಣ ನೆನಪಾಗುವುದು ಹೆಗಲ ಮೇಲೆ ಪಾರಿವಾಳವನ್ನು ಇಟ್ಟುಕೊಂಡಿರುವ ಆ ಮುಖವೇ. ಪಾರಿವಾಳ ಎಲ್ಲೆ ಹಾರೋದ್ರೂ, ಕುಳಿತುಕೊಳ್ಳೋದು ನಮ್ಮ ಹೆಗಲ ಮೇಲೆಯೇ ಎಂದು ಪುನೀತ್‌ ಅವರು ಸಂದರ್ಶನವೊಂದರಲ್ಲಿ ಡೈಲಾಗ್‌ ಕೂಡ ಹೇಳಿದ್ದರು.

ಪಾರಿವಾಳಕ್ಕೂ, ಅಪ್ಪುವಿಗೂ ಅದೇನು ನಂಟೋ ಗೊತ್ತಿಲ್ಲ. ಶಿವಮೊಗ್ಗದ ತ್ಯಾವರೆಕೊಪ್ಪ ಗ್ರಾಮದ ಲಕ್ಷ್ಮೀಪತಿ ಅವರ ಮನೆಯಲ್ಲಿ ಇಟ್ಟ ಪುನೀತ್‌ ಅವರ ಫೋಟೋ ಪಕ್ಕದಲ್ಲಿ ನಿಜಕ್ಕೂ ಪಾರಿವಾಳ ಬಂದು ಕುಳಿತು ಅಚ್ಚರಿ ಮೂಡಿಸಿದೆ.

ಪುನೀತ್‌ ಅವರ ಅಭಿಮಾನಿಯಾಗಿರುವ ಲಕ್ಷ್ಮೀಪತಿ ಅವರು ತಮ್ಮ ಮನೆಯಲ್ಲಿ ಪುನೀತ್‌ ಅವರ ಭಾವಚಿತ್ರವನ್ನಿಟ್ಟು ಅವರಿಗೆ ಇಷ್ಟವಾದ ಸಸ್ಯಾಹಾರ ಹಾಗೂ ಮಾಂಸಹಾರವನ್ನಿಟ್ಟು ಪೂಜೆ ಮಾಡಿದರು. ಪೂಜೆ ನಡೆಯುತ್ತಿದ್ದ ವೇಳೆಯೇ ಪಾರಿವಾಳವೊಂದು ಹಾರಿ ಬಂದು ಫೋಟೋದ ಪಕ್ಕದಲ್ಲಿ ಕುಳಿತುಕೊಂಡಿದೆ.

ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರನ್ನು ಅಚ್ಚರಿಯಲ್ಲಿ ತೇಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net