

ಬೆಂಗಳೂರು: ಕರೊನಾ ಮಹಾಮಾರಿ ಮಾನವ ಕುಲವನ್ನೇ ಕಾಡುತ್ತಿದ್ದರೇ ಇತ್ತ ಸೈಬರ್ ಕಳ್ಳರು ಕೋವಿಡ್ನೇ ಬಂಡವಾಳ ಮಾಡಿಕೊಂಡು ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ. ತುರ್ತು ಸಮಯದಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುವುದಾಗಿ ಮಹಿಳಾ ಪೊಲೀಸ್ನಿಂದ 9 ಸಾವಿರ ರೂ. ಪಡೆದು ಸೈಬರ್ ಕಳ್ಳ ಮೋಸ ಮಾಡಿದ್ದು, ಉತ್ತರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 4ರಂದು ಮಹಿಳಾ ಪೊಲೀಸ್ ಮೊಬೈಲ್ಗೆ ದುರ್ಗಾ ಆಕ್ಸಿಜನ್ ಸಪ್ಲೆಯರ್ಸ್ ಕಂಪನಿ ಹೆಸರಿನಲ್ಲಿ ಾರ್ವಡ್ ಸಂದೇಶ ಬಂದಿದೆ. ಅದರಲ್ಲಿ 7,500 ರೂ.ಗೆ 47 ಲೀಟರ್ ಅಮ್ಲಜನಕ ಸಿಲಿಂಡರ್ ಪೂರೈಕೆ ಮಾಡುವುದಾಗಿ ಮೊಬೈಲ್ ನಂಬರ್ ಸಮೇತ ಉಲ್ಲೇಖವಾಗಿತ್ತು. ಇದನ್ನು ಗಮನಿಸಿದ ಮಹಿಳಾ ಪೊಲೀಸ್, ವೊಬೈಲ್ ನಂಬರ್ಗೆ ಕರೆ ಮಾಡಿದಾಗ ಹಿಂದಿಯಲ್ಲಿ ಮಾತನಾಡಿದ ಅಪರಿಚಿತ ಸಿಲಿಂಡರ್ 45 ಸಾವಿರ ರೂ. ಆಗುತ್ತೆ. ಈಗ 9 ಸಾವಿರ ರೂ. ಪಾವತಿ ಮಾಡಿದರೆ ನಿಮ್ಮ ಮನೆಗೆ ತಲುಪಿಸುವುದಾಗಿ ಹೇಳಿದ್ದಾನೆ. ಆತನ ನಂಬಿದ ಮಹಿಳಾ ಪೊಲೀಸ್, ಗೂಗಲ್ ಪೇನಲ್ಲಿ 9 ಸಾವಿರ ರೂ. ಜಮೆ ಮಾಡಿದ್ದಾರೆ.
ಉಳಿಕೆ ಹಣ ಸಿಲಿಂಡರ್ ಕೊಟ್ಟ ಮೇಲೆ ನೀಡುವಂತೆ ಹೇಳಿ ಕರೆ ಸ್ಥಗಿತ ಮಾಡಿದ. ಎಷ್ಟು ಹೊತ್ತಾದರೂ ಸಿಲಿಂಡರ್ ಬರಲಿಲ್ಲ. ಕೊನೆಗೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆ್ ಆಗಿತ್ತು. ಹಣ ಪಡೆದು ವಂಚನೆ ಮಾಡಿದ ಆರೋಪಿಯನ್ನು ಪತ್ತೆ ಮಾಡಬೇಕೆಂದು ಮಹಿಳಾ ಪೊಲೀಸ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.