ಡಿಸಿಎಂ ಸ್ಥಾನ ಸಿಗದ ಸಂಕಟದಲ್ಲಿದ್ದ ಶ್ರೀರಾಮುಲುಗೆ ಮತ್ತೊಂದು ಆಘಾತ! ಕೈತಪ್ಪಿದ ಬಳ್ಳಾರಿ

shreeramulu
Published on

ಬಳ್ಳಾರಿ: ಉ‍ಪಮುಖ್ಯಮಂತ್ರಿಯಾಗಬೇಕೆಂದು ಬಹಳ ಕನಸು ಕಂಡಿದ್ದ ಸಚಿವ ಶ್ರೀರಾಮುಲು ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಈ ಬಾರಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರ ಕನಸು ಭಗ್ನವಾಗಿತ್ತು. ಆದರೆ ಇದೀಗ ಬಳ್ಳಾರಿಯೂ ಅವರ ಕೈತಪ್ಪಿದೆ.

ಶ್ರೀರಾಮುಲು ಅವರಿಗೆ ಬಳ್ಳಾರಿಯ ಉಸ್ತುವಾರಿಯಾಗಬೇಕು ಎಂಬ ಬಹುದೊಡ್ಡ ಕನಸಿತ್ತು. ಆದರೆ ಅದು ಕೂಡ ಈಗ ಭಗ್ನವಾಗಿದೆ. ಕರೊನಾ ಹಾಗೂ ಪ್ರವಾಹ ನಿರ್ವಹಣೆಯ ಹೆಸರಿನಲ್ಲಿ ನೂತನ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನ ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯನ್ನು ಆನಂದ್ ಸಿಂಗ್‌ ಅವರಿಗೆ ನೀಡಲಾಗಿದೆ.

ಶ್ರೀರಾಮುಲುಗೆ ಚಿತ್ರದುರ್ಗದ ಜಿಲ್ಲೆಯನ್ನು ಹಂಚಿಕೆ ಮಾಡಲಾಗಿದೆ. ಶ್ರೀರಾಮುಲು ನಾಲ್ಕು ಬಾರಿ ಸಚಿವರಾಗಿದ್ದರೂ ತಾವು ಬಯಸಿದ ಬಳ್ಳಾರಿ ಉಸ್ತುವಾರಿ ಸಿಕ್ಕಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ಬಳ್ಳಾರಿ ಉಸ್ತುವಾರಿ ಪಡೆಯಲು ಬಾರಿ ಲಾಬಿ ಮಾಡಿದ್ದರೂ ಆಗಲೂ ಅವರು ವಿಫಲರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net