ಮಾಜಿ ಸಿಎಂ ಕುಮಾರಸ್ವಾಮಿ ಶೀಘ್ರದಲ್ಲಿ ಆಗ್ತಿದ್ದಾರೆ ತಾತ: ಕಂದನ ನಿರೀಕ್ಷೆಯಲ್ಲಿ ಗೌಡ್ರ ಕುಟುಂಬ

HDK
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮನೆಯಲ್ಲಿ ಈಗ ಸಂತಸದ ವಾತಾವರಣ. ಕುಮಾರಸ್ವಾಮಿಯವರಿಗೆ ತಾತಾ ಎಂದು ಕರೆಸಿಕೊಳ್ಳುವ ಸಮಯವಿದು.

2020ರ ಏಪ್ರಿಲ್‌ ತಿಂಗಳಿನಲ್ಲಿ ವಿವಾಹವಾಗಿರುವ ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಅವರು ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದು, ಅವರ ಪತ್ನಿ ರೇವತಿ ಐದು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಗುಡ್‌ನ್ಯೂಸ್‌ ಬಗ್ಗೆ ಖುದ್ದು ಕುಮಾರಸ್ವಾಮಿ ಅವರು ಖಚಿತಪಡಿಸಿದ್ದಾರೆ.

ಇಂದು (ಸೋಮವಾರ) ರೇವತಿಯವರು ಹುಟ್ಟುಹಬ್ಬವಿದ್ದು, ಈ ದಿನದಂದೇ ಶುಭ ಸುದ್ದಿಯನ್ನು ಅವರು ಹೇಳಿದ್ದಾರೆ. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆಯ ಮೆಹಂದಿ ಸಂದರ್ಭದಲ್ಲಿ ಸೆರೆ ಹಿಡಿದ ಫೋಟೋವನ್ನು ನಿಖಿಲ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, "ಹ್ಯಾಪಿ ಬರ್ತಡೇ ಮೈ ಲವ್' ಎಂದು ಬರೆದುಕೊಂಡಿದ್ದಾರೆ. 2020ರ ಏಪ್ರಿಲ್ 17ರ ಲಾಕ್‌ಡೌನ್ ಸಮಯದಲ್ಲಿ ನಿಖಿಲ್ ಮತ್ತು ರೇವತಿ ರಾಮನಗರ ಜಿಲ್ಲೆ ಬಿಡದಿ ತೋಟದ ಮನೆಯಲ್ಲಿ ಸರಳವಾಗಿ ವಿವಾಹವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net