ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಎಸ್.ನಿಧಿ ಮತ್ತು ತನೀಶ್ ಹಾಗೂ ರೋನಿಕ್ ಆಯ್ಕೆ

13
Published on

ಮೈಸೂರು: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಈಜುಕೊಳದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಾಲಾ ಈಜು ಸ್ಪರ್ಧೆಯಲ್ಲಿ ಸದ್ವಿದ್ಯಾ ಶಾಲೆಯ ಎಸ್.ನಿಧಿ ಮತ್ತು ತನೀಶ್ ಹಾಗೂ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಶಾಲೆಯ ರೋನಿಕ್ ಪದಕ ಪಡೆದು ಗಮನ ಸೆಳೆದರು. ಜತೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

17 ವರ್ಷದೊಳಗಿನ ವಿಭಾಗದಲ್ಲಿ ಎಸ್.ನಿಧಿ 3 ಚಿನ್ನದ ಪದಕ ಪಡೆದರು. 400 ಮೀ.ಫ್ರೀ ಸ್ಟೈಲ್, 400 ಮೀ.ಎಂಐ, 200 ಮೀ.ಎಂಐ ಪ್ರಥಮ ಸ್ಥಾನ ಪಡೆದರು. 14 ವರ್ಷದೊಳಗಿನ ವಿಭಾಗದಲ್ಲಿ ರೋನಿಕ್ 2 ಚಿನ್ನ, ಒಂದು ಬೆಳ್ಳಿ ಪದಕ ಪಡೆದರು. 50 ಮೀ.ಬಟರ್‌ಫ್ಲೈ, 100 ಮೀ.ಫ್ರೀ ಸ್ಟೈಲ್‌ನಲ್ಲಿ ಪ್ರಥಮ ಹಾಗೂ 200 ಮೀ.ಎಂಐ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು.

ಎಸ್.ತನೀಶ್ ಕೂಡ 2 ಚಿನ್ನ, ಒಂದು ಬೆಳ್ಳಿ ಪದಕ ಪಡೆದರು. 200 ಮೀ.ಎಂಐ, 100 ಮೀ.ಬಟರ್ ಫ್ಲೈನಲ್ಲಿ ಪ್ರಥಮ ಹಾಗೂ 100 ಮೀ.ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಈ ಮೂವರು ತರಬೇತುದಾರ ಸಾಯಿ ಸಮರ್ಥ್ ಬಳಿ ಅಭ್ಯಾಸ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net