ಹುಬ್ಬಳ್ಳಿಯ ’ಸಾವಿನ ಹೆದ್ದಾರಿ’ಗೆ ಮತ್ತೊಂದು ಬಲಿ: ಮದುವೆಯಾದ ವಾರದಲ್ಲೇ ಮಸಣ ಸೇರಿದ ಯುವಕ!

accident
Published on

ಹುಬ್ಬಳ್ಳಿ: ಕೇವಲ ಎರಡು ದಿನಗಳ ಅಂತರಲ್ಲಿ ಎರಡು ಭೀಕರ ಅಪಘಾತಗಳು ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ನಡೆದಿದ್ದು, ಒಟ್ಟು 18 ಮಂದಿ ದಾರುಣವಾಗಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಈ ಹೆದ್ದಾರಿಯು ಸಾವಿನ ಹೆದ್ದಾರಿ ಎಂದೇ ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ ಈ ಹೆದ್ದಾರಿ ಇಂದು ಮತ್ತೊಂದು ಬಲಿ ಪಡೆದಿದೆ.

ಬುಲ್ಯೋರೊ ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ‌ಯ ತಾರಿಹಾಳ ಬಳಿಯ ಬೈಪಾಸ್‌ನಲ್ಲಿ ಘಟನೆ.

ಆನಂದ ಮಾದರ (27) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರ ಮದುವೆ ಇದೇ 20ರಂದು ನಡೆದಿತ್ತು. ಮದುವೆಯಾದ ವಾರದಲ್ಲಿಯೇ ಆನಂದ್‌ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.

ಇವರು ಹುಬ್ಬಳ್ಳಿ ತಾಲೂಕಿನ ಚಳಮಟ್ಟಿ ಗ್ರಾಮದ ನಿವಾಸಿ. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net