VIDEO: ಹೀಗೆ ಹೋಗಿ ಹಾಗೆ ಬರುವಷ್ಟರಲ್ಲಿ ನವಜಾತ ಶಿಶು ಗಾಯಬ್​! ದಾವಣಗೆರೆ ಆಸ್ಪತ್ರೆಯ ಸಿಬ್ಬಂದಿಯ ಕೈವಾಡ?

theft
Published on

ದಾವಣಗೆರೆ: ಹೆರಿಗೆಯಾದ 2 ಗಂಟೆಯಲ್ಲಿ ನವಜಾತ ಶಿಶು ನಾಪತ್ತೆಯಾಗಿರುವ ಪ್ರಕರಣ ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾತ್ರಿ ನಡೆದಿದೆ.

ಸಂಬಂಧಿಕರ ಸೋಗಿನಲ್ಲಿ ಉಮ್ಮೇಸಲ್ಮಾ (22) ಎಂಬುವವರ ಮಗುವನ್ನು ಅಪಹರಿಸಿಕೊಂಡು ಅಪರಿಚಿತ ಮಹಿಳೆ ಪರಾರಿಯಾಗಿದ್ದು, ಸಿಸಿಟಿವಿಯಲ್ಲಿ ಘಟನಾ ದೃಶ್ಯಾವಳಿ ಸೆರೆಯಾಗಿದೆ. ಈ ಮಗು ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಉಮ್ಮೇಸಲ್ಮಾ- ಇಸ್ಮಾಯಿಲ್ ಜಬೀವುಲ್ಲಾ ದಂಪತಿಯದ್ದು.

ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಹೆರಿಗೆ ಬಳಿಕ ಮಗುವಿಗೆ ಬಟ್ಟೆ ತರಲು ಅವರು ಹೇಳಿದ್ದರು. ತಂದೆ ಬಟ್ಟೆ ತರುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು. ಸಂಬಂಧಿಕರ ಸೋಗಲ್ಲಿ ಬಂದ ಮಹಿಳೆ ಸಿಬ್ಬಂದಿಯಿಂದ ಮಗು ಪಡೆದು ಗಾಯಬ್ ಆಗಿದೆ.

ಮಗುವನ್ನು ಆಸ್ಪತ್ರೆಯ ಸಿಬ್ಬಂದಿಯೇ ಮಾರಾಟ ಜಾಲದ ಶಂಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ದಾಖಲಾಗಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. (ದಿಗ್ವಿಜಯ ನ್ಯೂಸ್​) ಸಿಸಿಟಿವಿಯ ದೃಶ್ಯ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net