

ನಾಯಕನಹಟ್ಟಿ (ಚಿತ್ರದುರ್ಗ): ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ತಲೆ ಮೇಲೆ ಕಲ್ಲು ಹಾಕಿ ಮೂವರ ಭೀಕರ ಹತ್ಯೆ ನಡೆದಿದೆ.
ನಾಯಕನಹಟ್ಟಿ ಗ್ರಾಮದ ಬಳಿ ಘಟನೆ ನಡೆದಿರುವುದು ವರದಿಯಾಗಿದೆ. ಹತ್ಯೆಗೀಡಾದವರು ಹಂದಿ ಸಾಕಣೆ ಮಾಡಿಕೊಂಡಿದ್ದವರು ಎಂದು ತಿಳಿದುಬಂದಿದೆ.
ಮಾರೇಶ (50), ಯಲ್ಲೇಶ (30), ಸೀನಪ್ಪ (30) ಮೃತಪಟ್ಟವರು. ಹಂದಿ ಸಾಕಣೆ ಮಾಡುವ ಗುಂಪಿನ ನಡುವೆ ಮಾರಾಮಾರಿ ನಡೆದಿರುವುದು ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ವಾಹನಗಳಲ್ಲಿ ಬಂದು ಕಾರದ ಪುಡಿ ಎರಚಿ ಕೊಲೆ ಮಾಡಿರುವ ಕುರುಹು ಪತ್ತೆಯಾಗಿದೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.