

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ವರದಿಯಾಗುತ್ತಲೇ ಇದೆ. ಇಂಥದ್ದೊಂದು ಜಾಲವನ್ನು ಭೇದಿಸಲು ಹೊರಟ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ ಟಿಕ್ಟಾಕ್ ಸುಂದರಿ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಕಟ್ಟಡದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅದರ ಕಿಂಗ್ಪಿನ್ ಆಗಿರುವ ಈಕೆಯನ್ನು ಬಂಧಿಸಿದ್ದಾಳೆ. ಈಕೆಯ ಜತೆಗೆ ವೇಶ್ಯಾವಾಟಿಕೆ ದಂಧೆಯಲ್ಲಿ ಸಹಕರಿಸುತ್ತಿದ್ದ ಮತ್ತೋರ್ವನನ್ನೂ ಬಂಧಿಸಲಾಗಿದೆ.
ಬಂಧಿತ ಮಹಿಳೆಯನ್ನು ಸುಮಾ ಎಂದು ಗುರುತಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಈ ಮೊದಲು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಈಕೆ ಸಿಕ್ಕಿಬಿದ್ದಿದ್ದಳು. ಆದರೆ ಎಷ್ಟು ಮುಗ್ಧೆಯಂತೆ ಈಕೆ ನಟನೆ ಮಾಡಿದಳು ಎಂದರೆ ಪೊಲೀಸರನ್ನೇ ಯಾಮಾರಿಸಿಬಿಟ್ಟಿದ್ದಳು. ಈಕೆಯನ್ನು ಆ ಜಾಗದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾಗ ನಾನು ಸಂತ್ರಸ್ತೆ, ಬಲವಂತದಿಂದ ನನ್ನನ್ನು ಈ ಜಾಲಕ್ಕೆ ತಳ್ಳಿದ್ದಾರೆ ಎಂದು ಹೇಳಿ ಕಣ್ಣಿರಿಟ್ಟಿದ್ದಳು.
ಇದನ್ನು ನಂಬಿದ್ದ ಪೊಲೀಸರು ಆಕೆಯನ್ನು ಸಂತ್ರಸ್ತೆ ಎಂದು ಹೇಳಿಕೊಂಡಿದ್ದಳು. ಇದೀಗ ಬಂಧನವಾದಾಗಲೇ ಈಕೆಯ ಅಸಲಿಯತ್ತು ಹೊರಕ್ಕೆ ಬಂದಿದೆ. ಇವಳೇ ಇದರ ಕಿಂಗ್ಪಿನ್ ಎಂದು ತಿಳಿದಿದೆ.
ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಸುಮಾ, ಸುಂದರಿಯಂತೆ ಮೇಕಪ್ ಮಾಡಿಕೊಂಡು ಯುವಕರನ್ನು ತನ್ನ ದಂಧೆಗೆ ಸೆಳೆಯುತ್ತಿದ್ದಳು. ಸದ್ಯ ಮೇಟಗಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವಳ ಜತೆ ಸಿದ್ದರಾಜು ಎಂಬಾತನನ್ನೂ ಬಂಧಿಸಲಾಗಿದೆ.