ಪಿಯು ಫಲಿತಾಂಶ ತಿರಸ್ಕರಿಸಿದ ಮೈಸೂರು ವಿದ್ಯಾರ್ಥಿಗಳು- ಪರೀಕ್ಷೆ ಮಾಡಿ ಎಂದು ಪಟ್ಟು

PUC
Published on

ಮೈಸೂರು: ದ್ವಿತೀಯ ಪಿಯುಸಿ ಫಲಿತಾಂಶ ಬಂದು ಹಲವು ದಿನಗಳು ಕಳೆದಿವೆ. ಕರೊನಾ ಕಾರಣದಿಂದ ಪರೀಕ್ಷೆ ಮಾಡದೇ ಎಸ್​ಎಸ್​ಎಲ್​ಸಿ ಮತ್ತು ಪ್ರಥಮ ಪಿಯು ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲಾಗಿತ್ತು.

ಆದರೆ ದ್ವೀತಿಯ ಪಿಯು ಫಲಿತಾಂಶವನ್ನು ಮೈಸೂರಿನ 11 ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ. ನಮಗೆ ಪರೀಕ್ಷೆ ಇಲ್ಲದ ಈ ರಿಸಲ್ಟ್​ ಬೇಡ. ನಾವು ಪೂರಕ ಪರೀಕ್ಷೆ ಬರೆಯುತ್ತೇವೆ. ನಮಗೆ ಇದಕ್ಕಿಂತಲೂ ಅಧಿಕ ಅಂಕ ಬರುತ್ತದೆ ಎಂದು ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಡಿಡಿಪಿಯು ಶ್ರೀನಿವಾಸ ಮೂರ್ತಿ ಹೇಳಿಕೆ ನೀಡಿದ್ದಾರೆ. ಮೈಸೂರು ನಗರದಲ್ಲಿ ಆರು ವಿದ್ಯಾರ್ಥಿಗಳು, ಕೆ ಆರ್ ನಗರದಲ್ಲಿ ಮೂವರು, ಹುಣಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ರಿಸಲ್ಟ್ ರಿಜೆಕ್ಟ್ ಮಾಡಿದ್ದಾರೆ. ಆಗಸ್ಟ್ ಕೊನೆಯ ವಾರದಲ್ಲಿ ಪಿಯು‌ ಪೂರಕ ಪರೀಕ್ಷೆ ಆರಂಭವಾಗಲಿದ್ದು, ಆಗ ನಾವು ಪೂರಕ ಪರೀಕ್ಷೆ ಬರೆಯಲಿದ್ದೇವೆ ಎಂದಿದ್ದಾರೆ.

ನಿರೀಕ್ಷೆಯಷ್ಟು ಅಂಕ ಬಂದಿಲ್ಲ, ಫಲಿತಾಂಶ ತೃಪ್ತಿದಾಯಕವಲ್ಲ ಎಂದಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದಾರೆ. ಈ 11 ಮಂದಿ ವಿದ್ಯಾರ್ಥಿಗಳ ಜತೆ ಕಳೆದ ವರ್ಷದ 6 ವಿದ್ಯಾರ್ಥಿಗಳು ಸೇರಿದಂತೆ ಖಾಸಗಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲಾಗುವುದು ಎಂದು ಶ್ರೀನಿವಾಸ ಮೂರ್ತಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net