ಮೈಸೂರಲ್ಲೊಂದು ಭಯಾನಕ ಕೃತ್ಯ: ಜಗಳ ಬಿಡಿಸಲು ಬಂದ ಬಾಮೈದುನನ ಕೈ ಕತ್ತರಿಸಿ ಠಾಣೆಗೆ ತಂದ ಬಾವ!

mysore
Published on

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಉಂಟಾದ ಜಗಳದಲ್ಲಿ ಬಾವನನ್ನೇ ಕೊಂದ ಬಾಮೈದ ಆತನ ಕೈಯನ್ನು ಕತ್ತರಿಸಿ ಚೀಲದೊಳಕ್ಕೆ ಪೊಲೀಸ್​ ಠಾಣೆಗೆ ತಂದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾನಗರದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ಕಳೆದ ಐದು ತಿಂಗಳ ಹಿಂದೆಯಷ್ಟೇ ಮಹಮ್ಮದ್ ಸರಾನ್ ಮತ್ತು ರುಬೀನಾ ಮದುವೆಯಾಗಿದ್ದರು. ಇವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಈ ಸಂದರ್ಭದಲ್ಲಿ ಬಾಮೈದ ಸರಾನ್ (27) ಮತ್ತು ಇತರರು ಜಗಳ ಬಿಡಿಸಲು ಹೋಗಿದ್ದಾರೆ.

ಇದರಿಂದ ಸಿಟ್ಟುಕೊಂಡ ರುಬಿನಾ ಸಹೋದರ ಖದೀರ್​, ಬಾವನ ಕೈ ಕತ್ತರಿಸಿ ಕೊಲೆ ಮಾಡಿದ್ದಾನೆ. ನಂತರ ಚೀಲಕ್ಕೆ ಹಾಕಿಕೊಂಡು ಪೊಲೀಸ್ ಠಾಣೆಗೆ ತಂದಿದ್ದಾನೆ. ತಾನು ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಬಗ್ಗೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net