VIDEO: ಪೆಟ್ರೋಲ್​ ಹಾಕಿಸಿಕೊಳ್ಳಲು ಬರುವವರನ್ನು ಅಟ್ಟಾಡಿಸಿಕೊಂಡು ಹೋಗ್ತಿದೆ ಹುಚ್ಚು ಮಂಗ!

monkey1
Published on

ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಹುಚ್ಚುಮಂಗವೊಂದು ಜನರನ್ನು ಅಡ್ಡಾಡಿಸಿಕೊಂಡು ಹೋಗುತ್ತಿದ್ದು, ಇದರ ಕಾಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.

ಪೆಟ್ರೋಲ್ ಬಂಕ್​ಗೆ ಬರುವ ಜನರ ಮೇಲೆ ಮಂಗ ಎಗರುತ್ತಿದ್ದು, ಈ ದೃಶ್ಯ ಪೆಟ್ರೋಲ್ ಬಂಕ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಹಬೂಬ್ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಅಲ್ಲಿ ಪೆಟ್ರೋಲ್​ ಹಾಕಿಸಿಕೊಳ್ಳಲು ಬರುವ ಸಿಬ್ಬಂದಿಗೆ ಉಪಟಳ ಕೊಡುತ್ತಿದ್ದು, ಜನರು ಪೆಟ್ರೋಲ್​ ಬಂಕ್​ಗೆ ಹೋಗಲು ಭಯಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪೆಟ್ರೋಲ್​ ಬಂಕ್​ನ ಸಿಬ್ಬಂದಿಯ ಗೋಳಂತೂ ಹೇಳತೀರದಾಗಿದೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಇಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿ ಸಿಕ್ಕಸಿಕ್ಕವರ ಮೇಲೆ ಮಂಗ ದಾಳಿ ನಡೆಸುತ್ತಿದೆ.

ನೀವೂ ನೋಡಿ ಈ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net