

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ. ಆಡಕಿ ಗ್ರಾಮ ವಾಸ್ತವ್ಯ ನಿಮಿತ್ತ ಗ್ರಾಮಸ್ಥರ ಅಹವಾಲುಗಳನ್ನು ಕಂದಾಯ ಸಚಿವ ಆರ್. ಆಲಿಸಿದರು.
ಈ ವೇಳೆಯಲ್ಲಿ ಅವರ ಚಿಕ್ಕಮ್ನ ಭೈರಮ್ಮ ಅಕ್ಕಿಯಪ್ಪ ಅವರು ತೀರಿಕೊಂಡ ಸುದ್ದಿ ಬಂತು. ಕೂಡಲೇ ಅವರು ಬೆಂಗಳೂರಿಗೆ ಹೊರಟಿದ್ದಾರೆ. ಸುದ್ದಿ ಕೇಳಿದ ತಕ್ಷಣ ಕೆಲಹೊತ್ತು ಮೌನಕ್ಕೆ ಜಾರಿದ ಸಚಿವರು ಬಳಿಕ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಬೇಗ ಬೇಗನೆ ಮುಗಿಸಿಕೊಂಡು ಬೆಂಗಳೂರಿನ ಕಡೆಗೆ ಹೊರಟರು.
ಮೊದಲೇ ನಿಗದಿಯಾದಂತೆ ಸಂಜೆ ವಿಮಾನ ಮೂಲಕ ಹೋಗಬೇಕಾಗಿತ್ತು. ಬದಲಿಗೆ ಬೆಳಗ್ಗೆ 11-30 ವಿಮಾನಕ್ಕೆ ಹೋಗಲು ಶಾಸಕರು ಹಾಗೂ ಜಿಲ್ಲಾಡಳಿತ ಟಿಕೆಟ್ ವ್ಯವಸ್ಥೆ
ಮಾಡಿದರು. ಆಡಕಿಯಿಂದ ಈಗ ಸಚಿವರು ನಿರ್ಮಿಸಿದ್ದಾರೆ. ನೇರವಾಗಿ ವಿಮಾನ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಸ್ಟಾರ್ ಏರ್ ಮೂಲಕ ಬೆಂಗಳೂರಿಗೆ 12-30 ಕ್ಕೆ ತಲುಪಲಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಇರುವ ಸಚಿವರ ತಂದೆಯವರ ಸಹೋದರ ಅಕ್ಕಿಯಪ್ಪ ಅವರ ಪತ್ನಿ ಭೈರಮ್ಮ ನಿಧನರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.