ಬೆಂಗಳೂರಿನ ಮೆಟ್ರೋ ಕಾಮಗಾರಿ ವೇಳೆ ಅವಘಡ: 30 ಅಡಿ ಮಣ್ಣು ಕುಸಿತ- ತಪ್ಪಿದ ಭಾರಿ ಅನಾಹುತ

metro
Published on

ಬೆಂಗಳೂರು: ಕಳೆದ ವಾರ ಒಂದರ ಮೇಲೊಂದರಂತೆ ಬಹುಮಡಿ ಕಟ್ಟಡಗಳು ಕುಸಿದು ಬೆಂಗಳೂರಿನಲ್ಲಿ ಅವಘಡ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ ಮೆಟ್ರೊ ಕಾಮಗಾರಿಯ ವೇಳೆ ದುರಂತ ಸಂಭಿಸಿದೆ. ಟ್ಯಾನರಿ ರಸ್ತೆಯಲ್ಲಿ ಸುಮಾರು 30 ಅಡಿ ಮಣ್ಣು ಕುಸಿದು ಕೆಲಕಾಲ ಆತಂಕ ಸೃಷ್ಟಿಯಾಗಿದೆ. ಆದರೆ ಅದೃಷ್ಟವಶಾತ್‌ ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿಯಾಗಲಿಲ್ಲ.

ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಇಲ್ಲಿ ಸುರಂಗ ಕೊರೆಯಲಾಗಿತ್ತು. ಇದಾದ ಬಳಿಕ ಒತ್ತಡದಿಂದಾಗಿ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಈ ಜಾಗವು ಝುಬಿ ಎಂಬುವವರಿಗೆ ಸೇರಿದೆ. ಇಲ್ಲಿ ಮೊದಲು ಬಾವಿ ಇತ್ತು. ಅದನ್ನು ಅರು ಮುಚ್ಚಿದ್ದರು, ಈ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಜಾಗದಲ್ಲಿ ಮಣ್ಣು ಕುಸಿದಿರುವುದಾಗಿ ತಿಳಿದುಬಂದಿದೆ.

ಘಟನೆ ಸಂಭವಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಕಾರಣ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಆಗ್ರಹಿಸಿದ್ದಾರೆ.

ಮಣ್ಣು ಕುಸಿತದಿಂದಾಗಿ ಸಮೀಪದಲ್ಲಿ ವಾಸಿಸುತ್ತಿರುವ ತಮ್ಮ ಮನೆಗೆ ಕುಸಿತದ ಭೀತಿ ಎದುರಾಗಿದೆ. ಹೀಗಾಗಿ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಈ ಜಾಗವನ್ನು ತಮ್ಮ ವಶಕ್ಕೆ ಪಡೆದು ಪರಿಹಾರವನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಹೀಗೆಲ್ಲಾ ಸಮಸ್ಯೆ ಆಗುತ್ತದೆ ಎನ್ನುವುದನ್ನು ಅಧಿಕಾರಿಗಳು ಮೊದಲೇ ಪರಿಶೀಲನೆ ಮಾಡಲಾಗಿತ್ತು. ಅವರು ಏನೊಂದು ಯೋಚನೆ ಮಾಡದೇ ಸುರಂಗ ಕೊರೆದಿದ್ದಾರೆ. ಇದರಿಂದಾಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಮಗೆ ಪ್ರಾಣಭೀತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net