

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚೆಲುವನಾರಾಯಣನಿಗೆ ಇಂದು ಐತಿಹಾಸಿಕ ವೈರಮುಡಿ ಉತ್ಸವವು ನಡೆಯಲಿದೆ. ಕರೊನಾದಿಂದ ನಿಂತುಹೋಗಿದ್ದ ಈ ಉತ್ಸವ ಈ ಬಾರಿ ನಡೆಯುತ್ತಿದ್ದರೂ ಉತ್ಸವಕ್ಕೆ ಆರಂಭಿಕ ವಿಘ್ನ ಎದುರಾಗಿದೆ.
ಕಿರೀಟ ತೆಗೆದುಕೊಂಡು ಹೋಗುವ ವಿಚಾರಕ್ಕೆ ಸ್ಥಾನಿಕರ ನಡುವೆ ಜಟಾಪಟಿ ನಡೆದಿದೆ. 7 ಗಂಟೆಗೆ ತೆರಳಬೇಕಿದ್ದ ವೈರಮುಡಿ, ಆಭರಣಗಳು 8 ಗಂಟೆಯಾದರೂ ಮಂಡ್ಯಕ್ಕೆ ಬಾರದ ವೈರಮುಡಿ ಕೊಂಡೊಯ್ಯುವ ವಾಹನ. ಇದರಿಂದ ಮೇಲುಕೋಟೆಯಲ್ಲೇ ವಾಹನಕ್ಕೆ ಅಡ್ಡಿಪಡಿಸಿದ 4ನೇ ಸ್ಥಾನೀಕರು.
ವೈರಮುಡಿ ಕೊಂಡೊಯ್ಯಲು ಬಿಡದೆ ವಾಹನಕ್ಕೆ ಅಡ್ಡಿ ಮಾಡಲಾಗಿದೆ. ವಾಹನ ಬಾರದೆ ಮಂಡ್ಯದ ಭಕ್ತರು ಹಾಗೂ ಅಧಿಕಾರಿಗಳು ಕಾದು ಕುಳಿತಿದ್ದಾರೆ. ಮಂಡ್ಯದ ಜಿಲ್ಲಾ ಖಜಾನೆ ಬಳಿ ಭಕ್ತರು ಕಾಯುತ್ತಿರುವ ಘಟನೆ ನಡೆದಿದೆ.
ವೈರಮುಡಿ ಕೊಂಡೊಯ್ಯಲು ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನೀಕರ ಕುಟುಂಬದಿಂದ ಅಡ್ಡಿ ಮಾಡಿದ್ದರಿಂದ ಈ ಘಟನೆ ನಡೆದಿದೆ. 1ನೇ ಸ್ಥಾನೀಕರು ಪ್ರತಿವರ್ಷ ವೈರಮುಡಿ ತರುವ ಉಸ್ತುವಾರಿ ವಹಿಸಿದ್ದರು.
ಕಳೆದ ಬಾರಿ ಕೋರ್ಟ್ ನಮ್ಮ ಪರ ಆದೇಶ ಮಾಡಿತ್ತು. ಕೋರ್ಟ್ ಆದೇಶದಂತೆ ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನಿಕರು ಪಟ್ಟು ಹಿಡಿದಿದ್ದಾರೆ.
ಉತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ರಾತ್ರಿ 8 ಗಂಟೆಗೆ ಮೇಲುಕೋಟೆ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಲಿದೆ. ಚಲುವರಾಯಸ್ವಾಮಿಗೆ ಕೀರಿಟಧಾರಣೆ ಮಾಡಿ ಉತ್ಸವ ಮಾಡಲಾಗುತ್ತದೆ. ಇದಕ್ಕಾಗಿ ಮುಂಜಾನೆ ಖಜಾನೆಯಿಂದ ಅಭರಣಗಳು ತೆರಳಬೇಕಿತ್ತು. ಆದರೆ ವಿಘ್ನ ಉಂಟಾಗಿದೆ.