ಬೆಂಗಳೂರಿನಲ್ಲಿ ಲವ್‌ ಜಿಹಾದ್‌? ಮಗಳಿಗಾಗಿ ರಾಜಸ್ಥಾನದ ಪಾಲಕರ ದೌಡು- ಠಾಣೆಯ ಮುಂದೆ ಗಲಾಟೆ

love jihad
Published on

ಬೆಂಗಳೂರು: ಲವ್‌ ಜಿಹಾದ್‌ ಮತ್ತೆ ಸದ್ದು ಮಾಡಿದೆ. ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ಯುವತಿ ಹಾಗೂ ಮುಸ್ಲಿಂ ಯುವಕ ಮದುವೆಯಾಗಿದ್ದು, ಇದೀಗ ಹುಡುಗಿಯ ಪಾಲಕರು ಗೋಳೋ ಅನ್ನುತ್ತಿದ್ದಾರೆ.

ಎಂ ಎಸ್ ಪಾಳ್ಯದ ಶೇಖ್‌ ಷಾ ಎಂಬಾತ ರಾಜಸ್ಥಾನ ಮೂಲದ ಬೆಂಗಳೂರು ನಿವಾಸಿ ಲತಾಷ (19) ಎಂಬಾಕೆಯ ಜತೆ ಮದುವೆಯಾಗಿರುವುದು ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದೆ. ಈ ಮದುವೆ ಲವ್‌ ಜಿಹಾದ್ ರೂಪ ಪಡೆದಿದೆ.

ಶೇಖ್‌ ಷಾ ದೇವಸ್ಥಾನದಲ್ಲಿ ಯುವತಿಗೆ ತಾಳಿ ಕಟ್ಟಿದ್ದಾನೆ. ಇದು ತಿಳಿಯುತ್ತಲೇ ಪಾಲಕರು ಓಡಿಬಂದಿದ್ದಾರೆ. ನನ್ನ ಮಗಳ ತಲೆಕೆಡಿಸಿ ಯುವಕ ಮದುವೆಯಾಗಿದ್ದಾನೆ, ಈಗ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ನನ್ನ ಮಗಳನ್ನು ಮತಾಂತರ ಮಾಡುವ ಹುನ್ನಾರ ಇದು. ಇದೆಲ್ಲಾ ಆ ಯುವಕನದ್ದೇ ಕಿತಾಪತಿ ಎಂದು ಆರೋಪಿಸಿರುವ ಯುವತಿಯ ಪಾಲಕರು ಪೊಲೀಸ್ ಸ್ಟೇಷನ್‌ಗೆ ದೂರು ದಾಖಲಿಸಿದ್ದಾರೆ.

ಯುವಕ ಮತ್ತು ಯುವತಿ ಕೂಡ ಠಾಣೆಗೆ ಬಂದಿದ್ದು, ಠಾಣೆಯ ಮುಂದೆ ಜನಸಾಗರವೇ ಹರಿದು ಬಂದಿದೆ. ಪಾಲಕರು ಮಗಳನ್ನು ಕರೆದುಕೊಂಡು ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದರೂ, ಯುವತಿ ಒಪ್ಪುತ್ತಿಲ್ಲ. ನಾನು ಸ್ವ ಇಚ್ಛೆಯಿಂದ ಮದುವೆಯಾಗಿರುವುದಾಗಿ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net