

ಬೆಂಗಳೂರು: ಗ್ರಾಮ ಪಂಚಾಯಿತಿ ಗ್ರಂಥಾಲಯ ಹೆಸರನ್ನು ’ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ' ಎಂದು ಮರು ಪದನಾಮಕರಣ ಹಾಗೂ ಗ್ರಂಥಾಲಯ ವೇಳಯನ್ನು 6 ಗಂಟೆವರೆಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಗ್ರಂಥಾಲಯ ಮೇಲ್ವಿಚಾರಕರ ಗೌರವಧನವನ್ನು 7 ಸಾವಿರ ರೂ.ಗಳಿಂದ 12 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.
ಸಮಯ ಹೆಚ್ಚಳ:
ಸರ್ಕಾರದಿಂದ ಸಾರ್ವಜನಿಕ ರಜಾ ದಿನಗಳೆಂದು ಘೋಷಿಸಲ್ಪಟ್ಟ ರಜಾ ದಿನಗಳು, ಎಂದು ಘೋಷಿಸಲ್ಪಟ್ಟ ರಜಾ ದಿನಗಳು ಮತ್ತು ಪ್ರತಿ ತಿಂಗಳ ಎರಡನೇ ಮಂಗಳವಾರ ಹಾಗೂ ವಾರದ ರಜೆ (ಸೋಮವಾರ) ಹೊರತುಪಡಿಸಿ ಈ ಗ್ರಂಥಾಲಯಗಳ ಕೆಲಸ ವೇಳೆಯನ್ನು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ 5 ರವರೆಗೆ ನಿಗದಿಪಡಿಸಲಾಗಿದೆ.
ಶನಿವಾರ ಬೆಳಗ್ಗೆ 10 ರಿಂದ 1 ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಿಗದಿಪಡಿಸಲಾಗಿದೆ. ಹೆಚ್ಚಿರುವ ಸಮಯ ಹಾಗೂ ವಿಭಜಿತ ಸಮಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಗೌರವಧನವನ್ನು 7000 ರೂ.ಗಳಿಂದ 12,000 ರೂ.ಗಳಿಗೆ ಹೆಚ್ಚಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.