ಎಸ್.ಎಲ್.ಭೈರಪ್ಪ ಓದುಗರನ್ನು ಪ್ರಭಾವಿಸಿದ ಅನನ್ಯ ಸಾಹಿತಿ : ಡಾ. ಗಿರೀಶ್ ಭಟ್ ಅಜಕ್ಕಳ ಅಭಿಮತ

mng-6oct-byrappa
Published on


ಮಂಗಳೂರು : ಜೀವನದ ಅರ್ಥವನ್ನು ಶೋಧಿಸುವ ಪ್ರತಿಯೊಂದು ಕೃತಿಯೂ ವೈಚಾರಿಕ ಪ್ರಗತಿಗೆ ಕಾರಣವಾಗಿರುತ್ತದೆ ಎಂಬ ಚಿಂತನೆಯೊಂದಿಗೆ ಬರೆದ ಡಾ. ಎಸ್.ಎಲ್. ಭೈರಪ್ಪ ಅವರು ನಾಲ್ಕು ತಲೆಮಾರಿನ ಓದುಗ ವರ್ಗವನ್ನು ಪ್ರಭಾವಿಸಿದ ಅನನ್ಯ ಸಾಹಿತಿ ಎಂದು ಹಿರಿಯ ವಿಮರ್ಶಕ ಡಾ. ಗಿರೀಶ್ ಭಟ್ ಅಜಕ್ಕಳ ನುಡಿದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿ, ಚಿರಂತನ ಚಾರಿಟೆಬಲ್ ಟ್ರಸ್ಟ್, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಮತ್ತು ಬೆಂಗಳೂರಿನ ಸಪ್ತಕ ಸಂಸ್ಥೆ ವತಿಯಿಂದ ಸುರತ್ಕಲ್ನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆದ ಭೈರಪ್ಪ ನಮನ-ಗಾಯನ- ವಾದನ
ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಪುಷ್ಪ ನಮನ ಸಲ್ಲಿಸಿದರು. ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ ದೀಪ ಬೆಳಗಿದರು. ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ಚಿರಂತನ ಚಾರಿಟೇಬಲ್ ಟ್ರಸ್ಟ್‌ನ ಮೂರ್ತಿ ದೇರಾಜೆ, ಶಂಕರ್ ಉಪಸ್ಥಿತರಿದ್ದರು.
ಸುರತ್ಕಲ್ ರೋಟರಿ ಕ್ಲಬ್ ನಿರ್ದೇಶಕ ಕೃಷ್ಣ ಮೂರ್ತಿ ಸ್ವಾಗತಿಸಿ, ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ವಂದಿಸಿದರು. ಪ್ರಾಧ್ಯಾಪಕ ಕುಮಾರಸ್ವಾಮಿ ಹೊಸಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನೀಹಾರಿಕ ದೇರಾಜೆ ಇವರಿಂದ ಹಿಂದುಸ್ತಾನಿ ಹಾಡುಗಾರಿಕೆ ನಡೆಯಿತು. ಶ್ರೀವತ್ಸ ಶರ್ಮ ತಬ್ಲಾದಲ್ಲಿ ಮತ್ತು ಮೇಧಾ ಭಟ್ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಕಿರಣ್ ಹೆಗಡೆ ಮಗೆಗಾರ ಅವರಿಂದ ಬಾನ್ಸುರಿ ವಾದನ ನಡೆಯಿತು. ಭಾರವಿ ದೇರಾಜೆ ತಬಲದಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net