ಕೊಪ್ಪಳದ ಆಸ್ಪತ್ರೆಯ ರಟ್ಟಿನ ಬಾಕ್ಸ್‌ನಲ್ಲಿ ಹಸುಗೂಸಿನ ಶವ: ಗೊತ್ತೇ ಇಲ್ಲ ಎನ್ನುತ್ತಿರುವ ಸಿಬ್ಬಂದಿ!

baby
Published on

ಕೊಪ್ಪಳ: ಕೊಪ್ಪಳದ ಕಿಮ್ಸ್ ಬೋಧಕ‌ ಆಸ್ಪತ್ರೆಯಲ್ಲಿನ ರಟ್ಟಿನ ಬಾಕ್ಸ್ ನಲ್ಲಿ ನವಜಾತ ಶಿಶುವಿನ ಶವವಾಗಿ ಪತ್ತೆಯಾಗಿದೆ.

ಆಸ್ಪತ್ರೆಯ ಎನ್‌ಐಸಿಯು ವಾರ್ಡ್‌ನ ಮೂಲೆಯಲ್ಲಿ ಈ ಬಾಕ್ಸ್‌ ಬಿದ್ದಿದೆ. ಆಸ್ಪತ್ರೆಗೆ ಬಂದಿದ್ದ ಅಟೆಂಡರ್‌ಗಳಿಂದ ಪ್ರಕರಣ ಬೆಳಕಿಗೆ ಬಂದಿದೆ. ಅಟೆಂಡರ್‌ಗಳು ಈ ಬಾಕ್ಸ್ ಅನ್ನು ಕುತೂಹಲಕ್ಕೆ ತೆರೆದು ನೋಡಿದಾಗ ಅದರಲ್ಲಿರುವ ಹಸುಗೂಸಿನ ಶವ ಶಾಕ್ ಆಗಿದ್ದಾರೆ.

ಆದರೆ ಈ ಬಗ್ಗೆ ತಮಗೆ ಮಾತ್ರ ಯಾವುದೇ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ. ಪ್ರಕರಣ ಕುರಿತು ಸಾಕಷ್ಟು ಅನುಮಾನ ಹುಟ್ಟಿಹಾಕಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net