ಬಲವಂತದ ಬಂದ್​ ಮಾಡಬೇಡಿ ಎಂಬ ಆದೇಶಕ್ಕೆ ಡೋಂಟ್​ ಕೇರ್​- ಇಲ್ಲಿದೆ ನೋಡಿ ಕೆಲ ವಿಡಿಯೋ

bundh
Published on

ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 15 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಐವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗುತ್ತಿದೆ.

35 ಕೆಎಸ್​ಆರ್​ಪಿ, 32 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಇಂದು ಬೆಳಗ್ಗೆಯಿಂದಲೇ ಪ್ರತಿ ಏರಿಯಾದಲ್ಲಿ ಅಧಿಕಾರಿಗಳು, ಹೊಯ್ಸಳ, ಚೀತಾ ಗಸ್ತು ತಿರುಗುತ್ತಲಿದೆ.

ಈ ಮಧ್ಯೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ಬಿಬಿಎಂಪಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಇದಾಗಲೇ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದು, ಬಂದ್ ನೆಪದಲ್ಲಿ ಕಾನೂನು ಭಂಗ ಮಾಡುವಂತಿಲ್ಲ. ಬಂದ್ ಮಾಡಲು ಯಾರೂ ಅನುಮತಿ ಕೇಳಿಲ್ಲ. ಯಾರಿಗೂ ಕೊಟ್ಟಿಲ್ಲ ಎಂದಿದ್ದಾರೆ.

ಮಾತ್ರವಲ್ಲದೇ ಬಲವಂತವಾಗಿ ಅಂಗಡಿ, ಕಚೇರಿ, ರಸ್ತೆ ತಡೆ ಮಾಡುವಂತಿಲ್ಲ. ಮಾಡಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಕೆಲವು ಏರಿಯಾಗಳಲ್ಲಿ ಪ್ರತಿಭಟನಾಕಾರರು ತಲೆಕೆಡಿಸಿಕೊಂಡಂತಿಲ್ಲ. ಬಲವಂತದಿಂದ ಅಂಗಡಿಗಳನ್ನು ಬಂದ್​ ಮಾಡಿಸುವಂತಿಲ್ಲ ಎಂದು ಸ್ಟ್ರಿಕ್ಟ್​ ಆಗಿ ಹೇಳಿದ್ದರು ಕೂಡ ಕೆಲವು ಕಡೆಗಳಲ್ಲಿ ಪ್ರತಿಭಟನಾಕಾರರು ಬಲವಂತದಿಂದ ಅಂಗಡಿಗಳನ್ನು ಬಂದ್​ ಮಾಡಿಸಿದ್ದಾರೆ.

ಆ ಪೈಕಿ ಕೆಲ ವಿಡಿಯೋಗಳು ಇಲ್ಲಿವೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net