

ಕಲಬುರಗಿ: ಪೊಲೀಸರಿಂದ ತಪ್ಪಿಸಿಕೊಳ್ಳೋ ಭರದಲ್ಲಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿದ್ದು ಆರೋಪಿ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮುನ್ನಾ ಅಲಿಯಾಸ್ ಶೇಖ್ ಸೋಹೆಲ್ ಮೃತ ಆರೋಪಿ. ದರೋಡೆ ಪ್ರಕರಣದಲ್ಲಿ ಈತನನ್ನು ಬ್ರಹ್ಮಪೂರ ಪೊಲೀಸರು ಬಂಧಿಸಿದ್ದರು. ಈತನನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕಿತ್ತು. ಕೋರ್ಟ್ಗೆ ಹಾಜರಿಪಡಿಸುವ ಪೂರ್ವದಲ್ಲಿ ಕೋವಿಡ್ ತಪಾಸಣೆ ಅಗತ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಈತನನ್ನು ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಕೋವಿಡ್ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈತ. ಆಸ್ಪತ್ರೆಯ ಮೂರನೇ ಮಹಡಿ ಹತ್ತಿ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಈತ ಕಲಬುರಗಿಯ ಹಮಾಲವಾಡಿ ಬಡಾವಣೆಯ ನಿವಾಸಿಯಾಗಿದ್ದ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ (ದಿಗ್ವಿಜಯ ನ್ಯೂಸ್)