

ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ವತಿಯಿಂದ 2022-2023ರ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ಕ್ಕಿಂತ ಅಧಿಕ ಅಂಕ ಗಳಿಸಿದ 213 ಮಕ್ಕಳಿಗೆ 6,87,000 ರೂ. ವಿದ್ಯಾರ್ಥಿವೇತನ ಇತ್ತೀಚೆಗೆ ನೀಡಲಾಯಿತು.
ದಿ.ಬಂಟ್ವಾಳ ಗಣಪತಿ ಆಚಾರ್ಯ ಸ್ಮರಣಾರ್ಥ ಸಕ್ಕುಬಾಯಿ ಹಾಗೂ ದಿ.ಕೃಷ್ಣಗೋಪಾಲ ಸ್ಮರಣಾರ್ಥ ರಜನಿ ಎಸ್.ಪೈ ಹೂಡಿರುವ ಠೇವಣಿಯ ಬಡ್ಡಿಯಿಂದ ಆರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸಮೀಕ್ಷಾ (ಶೇ.99.36) ಮತ್ತು ದ್ವಿತೀಯ ಸಿಂಚನಾ (ಶೇ.98.72) ಮತ್ತು ತೃತೀಯ ಅಪೂರ್ವಲಕ್ಷ್ಮಿ ಎಸ್.ಎಂ (ಶೇ.98.56) ಹಾಗೂ ಮತ್ತು ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸುಶ್ಮಿತಾ ಸಿ.ಆಚಾರ್ಯ (ಶೇ.98.50), ದ್ವಿತೀಯ ವಿಷಿತಾ (ಶೇ.98) ಹಾಗೂ ತೃತೀಯ ತೇಜಸ್ವಿ (ಶೇ.97.83) ಅವರನ್ನು ಗೌರವಿಸಲಾಯಿತು.
ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ, ಉಪಾಧ್ಯಕ್ಷ ಎ.ಆನಂದ ಆಚಾರ್ಯ ಹಾಗೂ ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ಜಯ ವಿ.ಆಚಾರ್ಯ, ಕೆ.ಶಶಿಕಾಂತ್ ಆಚಾರ್ಯ, ಗಿರೀಶ್ ಕುಮಾರ್ ಯು., ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಪ್ರಕಾಶ್ ಆಚಾರ್ಯ ಕೆ., ಮಂಜುನಾಥ ಆಚಾರ್ಯ ಹಾಗೂ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಉಪಸ್ಥಿತರಿದ್ದರು.