

ಮಂಗಳೂರು : ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯ ಸಂಘದ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಉರ್ವ ಚರ್ಚ್ ಹಾಲ್‌ನಲ್ಲಿ ನಡೆಯಿತು.
ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರು ವಾರ್ಷಿಕ ವರದಿ ಮಂಡಿಸಿದರು. ವಜ್ರಮಹೋತ್ಸವ ವರ್ಷದ ಪ್ರಯುಕ್ತ 2023-2024ರ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಗೆ ಮಂಜೂರಾತಿ ಪಡೆಯಲಾಯಿತು.
2023-2024ನೇ ಸಾಲಿನಲ್ಲಿ ಸಂಘ 4.95 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ದ.ಕನ್ನಡ, ಉಡುಪಿ ಜಿಲ್ಲೆಯಾದ್ಯಂತ 17 ಬ್ಯಾಂಕಿಂಗ್ ಹಾಗೂ 1 ಕೈಗಾರಿಕಾ ಶಾಖೆ ಹೊಂದಿದ್ದು ಸದಸ್ಯರ ಬೇಡಿಕೆಗೆ ಸ್ಪಂದಿಸಿ ವ್ಯವಹಾರ ನಡೆಸುತ್ತಿದೆ ಎಂದು ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ತಿಳಿಸಿದರು.
ಪಂಚ ಕಸುಬುಗಳಲ್ಲಿ ಸಾಧನೆಗೈದ ಶಿಲ್ಪಿಗಳಾದ ಎಚ್. ಗೋಪಾಲ ಆಚಾರ್ಯ ಬೆಳ್ತಂಗಡಿ (ಸ್ವರ್ಣಶಿಲ್ಪ ), ಮಾಧವ ಆಚಾರ್ಯ ಸಂತೆಕಟ್ಟೆ, ಉಡುಪಿ (ಕಾಷ್ಠಶಿಲ್ಪ), ರಾಮಚಂದ್ರ ಆಚಾರ್ಯ ಕುಂಟಾಡಿ ,ಕಾರ್ಕಳ (ಎರಕ ಶಿಲ್ಪ) , ಸೀತಾರಾಮ ಆಚಾರ್ಯ ಗುಂಡಮಜಲು, ಮುಡಿಪು (ಅಯಸ್ ಶಿಲ್ಪ) , ಸೂರ್ಯಕಾಂತ ಆಚಾರ್ಯ ಶಿರ್ವ (ಶಿಲಾ ಶಿಲ್ಪ) ಇವರುಗಳಿಗೆ 2023-2024ರ ಸಾಲಿನ ಎಸ್.ಕೆ.ಜಿ.ಐ.ಪಾಲ್ಕೆ -ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರಗಳ ಸಾಧಕರಾದ ಪಿ. ನಾರಾಯಣ ಆಚಾರ್ ಕುಳಾಯಿ (ವೈದಿಕ ಕ್ಷೇತ್ರ),ಡಾ.್. ಪಿ. ಗುರುದಾಸ್‌ಮಂಗಳೂರು (ಹರಿಕಥಾ ಕ್ಷೇತ್ರ), ರಮೇಶ್ ಕೆ.-ಕಲ್ಲಡ್ಕ (ಕಲಾ ಕ್ಷೇತ್ರ),ಮೀನಾಕ್ಷಿ ನಾರಾಯಣ ಆಚಾರ್- ಬಂಟ್ವಾಳ (ನಾಟಿ ವೈದ್ಯೆ), ್ರೀಯ ಎ.- ಅಲಂಕಾರು (ಯಕ್ಷಗಾನ ಕ್ಷೇತ್ರ) ಇವರುಗಳನ್ನು ಸನ್ಮಾನಿಸಲಾಯಿತು.
2023-2024 ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಿ ಒಂದನೇ ವರ್ಗದಲ್ಲಿ ಪ್ರಥಮ ಸ್ಥಾನ ಕೋಟೇಶ್ವರ ಶಾಖೆ ಮತ್ತು ದ್ವಿತೀಯ ಸ್ಥಾನ ಮಂಗಳೂರು ಶಾಖೆಗೆ ನೀಡಲಾಯಿತು. ಎರಡನೇ ವರ್ಗದಲ್ಲಿ ಪ್ರಥಮ ಸ್ಥಾನ ಶಿರ್ವ-ಮಂಚಕಲ್ ಶಾಖೆಗೆ ಮತ್ತು ದ್ವಿತೀಯ ಸ್ಥಾನ ಬೆಳ್ಳಂಪಳ್ಳಿ ಶಾಖೆಗೆ ನೀಡಲಾಯಿತು.ಪ್ರೋತ್ಸಾಹಕ ಪ್ರಶಸ್ತಿಯನ್ನು ಗುರುವಾಯನಕೆರೆ ಶಾಖೆಗೆ ನೀಡಲಾಯಿತು.
ಸಂಸ್ಥೆಯ ಕಾನೂನು ಸಲಹೆಗಾರ ಎಂ. ಪುರುಷೋತ್ತಮ ಭಟ್ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿ ಮಾರ್ಗದರ್ಶನ ನೀಡಿದರು.ಉಪಾಧ್ಯಕ್ಷ ಎ. ಆನಂದ ಆಚಾರ್ಯ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ,ವೈ.ವಿ.ವಿಶ್ವಜ್ಞಮೂರ್ತಿ,ಜಯ ವಿ.ಆಚಾರ್ಯ, ಕೆ. ಶಶಿಕಾಂತ್ ಆಚಾರ್ಯ, ಮಲ್ಲಪ್ಪ .ಎನ್ ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಪ್ರಕಾಶ್ ಆಚಾರ್ಯ ಕೆ., ಮಂಜುನಾಥ ಆಚಾರ್ಯ ಮತ್ತು ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು. ಉಷಾ ಮನೋಜ್ ಮತ್ತು ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು.