

ಬೆಳಗಾವಿ: ನಗರದ ಎಸ್.ಕೆ.ಇ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆ.7ರಂದು ಬೆಳಿಗ್ಗೆ 10.30ಕ್ಕೆ ರಾಣಿ ಪಾರ್ವತಿ ದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕೆ.ಎಂ. ಗಿರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪುಣೆಯ ಭಾರತಿ ವಿದ್ಯಾಪೀಠ ಸ್ವಾಯತ್ತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಡಾ. ಮಾಣಿಕರಾವ್ ಎಂ. ಸಾಳುಂಕೆ ಅತಿಥಿಗಳಾಗಿ ಅಗಮಿಸುವರು. ಗೌರವ ಅತಿಥಿಯಾಗಿ ಸಾವಂತವಾಡಿ ರಾಜಮಾತಾ ರಾಣಿ ಪಾರ್ವತಿ ದೇವಿ ಅವರ ಮೊಮ್ಮಗ ಖೇಮ್‌ರಾಜ್ ಸಾವಂತ ಭೋಸಲೆ ಆಗಮಿಸುವರು. ಎಸ್.ಕೆ.ಇ. ಸಂಸ್ಥೆ ಅಧ್ಯಕ್ಷ ಕಿರಣ ಠಾಕೂರ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಎಸ್.ವೈ. ಪ್ರಭು, ಅಶೋಕ ಶಾನಭಾಗ, ಗೌರವ ಕಾರ್ಯದರ್ಶಿ ಮಧುಕರ ಸಾಮಂತ, ಆರ್.ಬಿ. ದೇಶಪಾಂಡೆ ಉಪಸ್ಥಿತರಿರುವರು. ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಎಲ್ಲ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಆರ್.ಪಿ.ಡಿ ಕಾಲೇಜು ಪ್ರಾಚಾರ್ಯ ಡಾ. ಅಭಯ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.