

ಕಾರ್ಮಿಕರ ರಾಜ್ಯ ವಿಮಾ ನಿಗಮದ ಬೆಂಗಳೂರಿನ ರಾಜಾಜಿನಗರದಲ್ಲಿರುವ ಪಿಜಿಐಎಂಎಸ್ಆರ್ ವೈದ್ಯಕಿಯ ಕಾಲೇಜಿನಲ್ಲಿ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದ್ದು, ನೇರ ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಹುದ್ದೆಗಳ ವಿವರ
ಚೆಸ್ಟ್ ಆ್ಯಂಡ್ ಟಿಬಿ ವಿಭಾಗದಲ್ಲಿ ಪ್ರೊಫೆಸರ್ -1 (ಸಾಮಾನ್ಯ), ಎಮರ್ಜೆನ್ಸಿ ಮೆಡಿಸಿನ್, ಜನರಲ್ ಮೆಡಿಸಿನ್ ಮತ್ತು ಸೈಕಿಯಾಟ್ರಿ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ -5 (ಸಾಮಾನ್ಯ-2, ಆರ್ಥಿಕವಾಗಿ ಹಿಂದುಳಿದ-1, ಇತರ-1, ಎಸ್ಸಿ-1) ಹಾಗೂ ಎಮೆರ್ಜನ್ಸಿ ಮೆಡಿಸಿನ್, ಪ್ಯಾಥಾಲಜಿಮ ಚೆಸ್ಟ್ ಆ್ಯಂಡ್ ಟಿಬಿ, ಜನರಲ್ ಮೆಡಿಸಿನ್, ಾರೆನ್ಸಿಕ್ ಮೆಡಿಸಿನ್ ಮತ್ತು ಕಮ್ಯುನಿಟಿ ಮೆಡಿಸಿನ್ ವಿಭಾಗದಲ್ಲಿ ಅಸ್ಟಿಸ್ಟೆಂಟ್ ಪ್ರೊಫೆಸರ್ -7 ಹುದ್ದೆ (ಸಾಮಾನ್ಯ-3, ಆಥಿರ್ಕವಾಗಿ ಹಿಂದುಳಿದ-1, ಇತರ-2 ಮತ್ತು ಎಸ್ಸಿ-1) ಹುದ್ದೆ ಮೀಸಲಿರಿಸಲಾಗಿದೆ. ಹುದ್ದೆಗಳ ಸಂಖ್ಯೆಯಲ್ಲಿ ಏರಿಕೆಯೂ ಆಗಬಹುದು ಇಳಿಕೆಯೂ ಆಗಬಹುದು. ಮೀಸಲಾತಿ ಅಭ್ಯಥಿರ್ಗಳು ಇಲ್ಲದಿದ್ದರೆ ಸಾಮಾನ್ಯವರ್ಗದ ಅಭ್ಯಥಿರ್ಗಳನ್ನೇ ಮೀಸಲಾತಿ ಹುದ್ದೆಗೆ ನೇಮಿಸಲಾಗುವುದು.
ವಯೋಮಿತಿ: ಸಂದರ್ಶನಕ್ಕೆ ಹಾಜರಾಗುವ ದಿನಾಂಕಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳ ಅಭ್ಯಥಿರ್ಗಳಿಗೂ ಗರಿಷ್ಠ 67 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ವೈದ್ಯಕಿಯ ಪದವಿ ಪಡೆದಿರಬೇಕು. ಎಲ್ಲ ಹುದ್ದೆಗಳಿಗೂ 3ರಿಂದ 9 ವರ್ಷ ವೃತ್ತಿ ಅನುಭವ ಕೇಳಲಾಗಿದೆ.
ವೇತನ: ಅಸಿಸ್ಟೆಂಟ್ ಪ್ರೊಫೆಸರ್ ಗೆ 1,30,797 ರೂ. ಅಸೋಸಿಯೇಟ್ ಪ್ರೊಫೆಸರ್ಗೆ 1,52,241 ಹಾಗೂ ಪ್ರೊಫೆಸರ್ಗೆ 2,28,942 ಲಕ್ಷ ರೂ. ವರೆಗೆ ಮಾಸಿಕ ವೇತನ ಇರಲಿದೆ. ವೃತ್ತಿ ಅನುಭವದ ಆಧಾರದ ಮೇಲೆ ವೇತನ ನಿಗದಿಯಾಗಲಿದೆ. ಇದರೊಂದಿಗೆ ಕಂಪನಿ ನಿಯಮದಂತೆ ಇತರ ಭತ್ಯೆ ಕೂಡ ಇರಲಿದೆ.
ಅರ್ಜಿ ಸಲ್ಲಿಸುವ ವಿಧಾನ: ಸಂಸ್ಥೆಯ ವೆಬ್ಸೈಟ್ನಲ್ಲಿ ಅರ್ಜಿಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ದಾಖಲೆ ಸರಿ ಇಲ್ಲದ, ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಮತ್ತು ವೃತ್ತಿ ಅನುಭವದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಅವಧಿಯಲ್ಲಿ ಕೆಲಸದಿಂದ ತೆಗೆಯುವ ಅಧಿಕಾರ ಸಂಸ್ಥೆಗಿರುತ್ತದೆ. ಆಯ್ಕೆಯಾಗುವ ಅಭ್ಯಥಿರ್ಗಳು 85,000 ರೂ. ಸೆಕ್ಯುರಿಟಿ ಡೆಪಾಸಿಟ್ ಇಡಬೇಕು. ಒಂದು ವರ್ಷದೊಳಗೆ ಕೆಲಸದಿಂದ ಬಿಟ್ಟರೆ ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಅರ್ಜಿಸಲ್ಲಿಸಲು ಕೊನೇ ದಿನ: 12.5.2022
ಅಧಿಸೂಚನೆಗೆ: https://bit.ly/3vAOSzx
ಮಾಹಿತಿಗೆ: https://www.esic.nic.in/