ಸಿಎಂ ಖುರ್ಚಿ ಖಾಲಿ ಇಲ್ರಪ್ಪ... ಯಾರು ಕೆಮ್ಮಿದ್ರೂ ನಾನೇ ಹೊಣೆ ಅಂತಾರಲ್ಲ: ಶೆಟ್ಟರ್‌ ಕಿಡಿ

shetter
Published on

ಹುಬ್ಬಳ್ಳಿ : ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಭಾರಿ ಚರ್ಚೆ ಆಗ್ತಿದೆ. ಆದ್ರೆ ಈಗ ನಾವು ಸಿಎಂ ಖುರ್ಚಿ ಖಾಲಿ ಇಲ್ಲ‌ ಎಂದು ಬೋರ್ಡ್‌ ಹಾಕಿಕೊಂಡು ಓಡಾಡಬೇಕಾದ ಸ್ಥಿತಿ ಬಂದಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ, ಆ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದರು. ಇನ್ನು ಶಾಸಕ ಅರವಿಂದ ಬೆಲ್ಲದ ಪೋನ್ ಕದ್ದಾಲಿಕೆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶೆಟ್ಟರ್‌, ಈ ವಿಷಯದ ಕುರಿತು ನಾನು ಮಾತನಾಡುವುದಿಲ್ಲ. ಈ ಬಗ್ಗೆ ಈಗಾಗಲೇ ರಾಜ್ಯಮಟ್ಟದಲ್ಲಿ ಚರ್ಚೆ ಆಗಿದೆ. ಯಾರಾದರೂ ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಅಂತಾರೆ. ಅಂಥ ಪರಿಸ್ಥಿತಿ ಬಂದುಬಿಟ್ಟಿದೆ. ಏನೂ ಮಾಡಲು ಆಗಲ್ಲ, ಯಾರ ಯಾರ ಹಣೆಯಲ್ಲಿ ಏನು ಬರೆದಿರುತ್ತೋ, ಅದೇ ಆಗುವುದು ಎಂದರು.

ಅರವಿಂದ ಬೆಲ್ಲದ ಓವರ್ ಟೇಕ್ ಮಾಡ್ತಾ ಇದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಶೆಟ್ಟರ್‌, ಅದು ಅವರ ಸ್ವಭಾವ ಆಗಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net