ಆಸ್ಪತ್ರೆಗಳ ಹಾಸಿಗೆ ಮಾರಾಟ ದಂಧೆಗೆ ಬೀಳಲಿದೆ ಕಡಿವಾಣ- ಸಿದ್ಧವಾಗಲಿದೆ ಹೊಸ ಸಾಫ್ಟ್‌ವೇರ್

bed
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಆಸ್ಪತ್ರೆಗಳ ಹಾಸಿಗೆ ಹಂಚಿಕೆ ಪಾರದರ್ಶಕ, ಸುವ್ಯವಸ್ಥಿತವಾಗಿಡಲು ಹೊಸ ಸಾಫ್ಟ್‌ವೇರ್ ಸಿದ್ಧವಾಗುತ್ತಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರ ಮನವಿಗೆ ನಂದನ್ ನಿಲೇಕಣಿ ಸ್ಪಂದಿಸಿ, ತಂತ್ರಾಂಶ ಮರು ವಿನ್ಯಾಸಕ್ಕಾಗಿ ತಾಂತ್ರಿಕ ತಂಡವನ್ನು ಸಜ್ಜುಗೊಳಿಸಿದ್ದಾರೆ.

ನುರಿತ ತಂತ್ರಜ್ಞರನ್ನು ಒಳಗೊಂಡ ಈ ತಂಡವು ಐಸ್ಪಿರಿಟ್ ಎಪ್ರಾಡಕ್ಟ್ -ನೇಷನ್ ಸಹಯೋಗದಲ್ಲಿ‌ ಬಿಬಿಎಂಪಿ ಬೆಡ್ ಹಂಚಿಕೆಗೆ ಹಸ್ತಕ್ಷೇಪರಹಿತ, ಪಾರದರ್ಶಕ ತಂತ್ರಾಂಶ ಅಭಿವೃದ್ಧಿಪಡಿಸಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ತೇಜಸ್ವಿ ಸೂರ್ಯ ಮತ್ತು ಶಾಸಕ ತ್ರಯರನ್ನು ಒಳಗೊಂಡ ತಂಡವು ಮಂಗಳವಾರ ಕ್ಚಿಪ್ರಗತಿಯ ಕಾರ್ಯಾಚರಣೆ ನಡೆಸಿ, ಹಣಕ್ಕಾಗಿ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಮಾರಾಟ ಕರಾಳ ದಂಧೆ ಪತ್ತೆ ಹಚ್ಚಿತ್ತು. ನಂತರ ಸಿಎಂ ಬಿಎಸ್ ವೈ ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ. ಕೂಡಲೇ ಸಿಎಂ ಸ್ಪಂದಿಸಿ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net