ವಿದ್ಯಾರ್ಥಿನಿಯರಿಂದ ಮತ್ತೆ ಹಿಜಾಬ್​ ಕ್ಯಾತೆ: ಮನವಿಗೂ ಸ್ಪಂದಿಸದ ಉಪ್ಪಿನಂಗಡಿಯ ಆರು ಮಂದಿ ಸಸ್ಪೆಂಡ್​

Hijab
Published on

ಮಂಗಳೂರು: ತಣ್ಣಗಾಗಿದ್ದ ಹಿಜಾಬ್​ ಗಲಾಟೆಯನ್ನು ಕೆಲವು ಶಾಲಾ-ಕಾಲೇಜುಗಳಲ್ಲಿ ಮತ್ತೆ ಶುರು ಮಾಡಲಾಗಿದೆ. ಹೈಕೋರ್ಟ್​, ಸರ್ಕಾರ, ಕಾಲೇಜುಗಳ ಆದೇಶಗಳಿಗೂ ಕ್ಯಾರೇ ಅನ್ನದೇ ಯಾವುದೇ ಒಂದು ಉದ್ದೇಶ ಇಟ್ಟುಕೊಂಡು ಬಂದವರಂತೆ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದು ಗಲಾಟೆ ಸೃಷ್ಟಿ ಮಾಡುತ್ತಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕಾಲೇಜಿನ ಆಡಳಿತ ಮಂಡಳಿ, ಆರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಹಿಜಾಬ್ ಹಾಕಿ ತರಗತಿ ಪ್ರವೇಶಿಸಿದ ಕಾರಣಕ್ಕೆ ಈ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಮುಂದಿನ ಆದೇಶದವರೆಗೆ ಅಮಾನತುಗೊಳಿಸಿ ಕಾಲೇಜಿನ ಪ್ರಾಂಶುಪಾಲರಿಂದ ಆದೇಶ ಹೊರಡಿಸಿದ್ದಾರೆ. ಹಿಜಾಬ್​ ಧರಿಸಿ ಕಾಲೇಜಿನ ಒಳಗೆ ಪ್ರವೇಶಿಸಬೇಡಿ ಎಂದು ಹಲವು ಬಾರಿ ಹೇಳಿದ ಹೊರತಾಗಿಯೂ, ಎಷ್ಟೇ ಮನವಿ ಮಾಡಿಕೊಂಡರೂ ವಿದ್ಯಾರ್ಥಿನಿಯರು ಕೇಳದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net