ವರುಣನ ರೌದ್ರಾವತಾರಕ್ಕೆ ಬೆಂಗಳೂರು- ಮೈಸೂರು ಹೆದ್ದಾರಿ ಬಂದ್​: ಪರ್ಯಾಯ ಮಾರ್ಗ ಹೀಗಿದೆ...

highway
Published on

ಮಂಡ್ಯ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣದ ಆರ್ಭಟ ಜೋರಾಗಿದೆ. ಕೆಲವು ಊರುಗಳಂತೂ ಅಕ್ಷರಶಃ ಪ್ರವಾಹಪೀಡಿತವಾಗಿವೆ. ಬೆಂಗಳೂರು, ಮೈಸೂರು, ಮಂಡ್ಯದ ಭಾಗಗಳಲ್ಲಿಯೂ ವರುಣ ರೌದ್ರಾವತಾರ ತೋರಿದ್ದಾನೆ.

ಮಂಡ್ಯದ ಹೊಸಬೂದನೂರು ಬಳಿ ಕೆರೆ ಕೋಡಿ ಒಡೆದಿರುವ ಕಾರಣ, ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ.

ಮಂಡ್ಯದಿಂದ 8 ಕಿ.ಮೀ ದೂರದಲ್ಲಿರುವ ಹೊಸ ಬೂದನೂರಿನ ಬಳಿ ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡ ಕೆರೆ ಕೋಡಿ ಒಡೆದುಹೋಗೊದ್ದರಿಂದ ಅವಾಂತರ ಸೃಷ್ಟಿಯಾಗಿದೆ. ಮೈಸೂರು- ಬೆಂಗಳೂರು ಸಂಚಾರಕ್ಕೆ ಕನಕಪುರ ಹಾಗೂ ನಾಗಮಂಗಲ ರಸ್ತೆಯಲ್ಲಿಯೇ ಸಂಚಾರ ಮಾಡಬೇಕಿದೆ.

ಪರ್ಯಾಯ ಮಾರ್ಗ:
* ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರು ಸಂಚಾರಕ್ಕೆ ಎರಡು ಬದಲಿ ಮಾರ್ಗ ಅನುಸರಿಸಬೇಕು.
* ಬೆಂಗಳೂರು-ಮದ್ದೂರು- ಮಳವಳ್ಳಿ ಬನ್ನೂರು ಮೂಲಕ ಮೈಸೂರಿಗೆ ತೆರಳಬೇಕು‌.
* ಮತ್ತೊಂದು ಮಾರ್ಗ: ಬೆಂಗಳೂರಿನಿಂದ ನೆಲಮಂಗಲ-ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ ಶ್ರೀರಂಗಪಟ್ಟಣ ಮೂಲಕ ಮೈಸೂರು.
* ಮದ್ದೂರಿನಿಂದ ಮಂಡ್ಯಕ್ಕೆ ಬರಬೇಕಾದ್ರೆ ಕೆ.ಎಂ.ದೊಡ್ಡಿಯಿಂದ ಮಂಡ್ಯ ನಗರಕ್ಕೆ ಬರಬಹುದು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net