ನಿವೃತ್ತ ನೌಕರರಿಗೂ ನೀಡಲಿ 'ಸಂಜೀವಿನಿ' ಸೌಲಭ್ಯ

Shivatthaya
Published on

ಜಿಲ್ಲಾ ನೂತನ ಅಧ್ಯಕ್ಷ ಹರಿಕೃಷ್ಣ ಶಿವತ್ತಾಯ ಒತ್ತಾಯ

ಉಡುಪಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು ಸಂಜೀವಿನಿ ಜೀವ ವಿಮಾ ಸೌಲಭ್ಯ ಒದಗಿಸಿದ್ದು, ಆ ಸೌಕರ್ಯವನ್ನು ನಿವೃತ್ತ ನೌಕರರಿಗೂ ಸಹ ಕೊಡಬೇಕು. ಅಲ್ಲದೆ, 80 ವರ್ಷದ ಬದಲಾಗಿ 70 ವರ್ಷ ದಾಟಿರುವ ನಿವೃತ್ತ ನೌಕರರಿಗೆ ಹೆಚ್ಚುವರಿಯಾಗಿ ಶೇ.10 ಪಿಂಚಣಿ ಸೌಲಭ್ಯ ನೀಡಬೇಕು ಎಂದು ಉಡುಪಿ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಎಸ್​. ಹರಿಕೃಷ್ಣ ಶಿವತ್ತಾಯ ಒತ್ತಾಯಿಸಿದರು.

ಉಡುಪಿಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಸೋಮವಾರ (ಅ.13) ಆಯೋಜಿಸಿದ್ದ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಬಳಿಕ ಮಾತನಾಡಿದರು.

ಸಂಘದ ಉಪಾಧ್ಯಕ್ಷರಾಗಿ ಆನಂದ ಗಾಣಿಗ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ನಾಯ್ಕ, ಸಹ ಕಾರ್ಯದರ್ಶಿಗಳಾಗಿ ಶಿವಣ್ಣ ಅಂಚನ್​, ರಾಮ್​ ಭಟ್​, ಕೋಶಾಧಿಕಾರಿಯಾಗಿ ಡಿ.ಚಂದ್ರಶೇಖರ, ಸಂಘಟನಾ ಕಾರ್ಯದರ್ಶಿಯಾಗಿ ವೀಣಾ ರಾವ್​ ಆಯ್ಕೆಯಾದರು.

ಕಳೆದ 12 ವರ್ಷದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾರಾಯಣ ಭಟ್​ ಅವರನ್ನು ಗೌರವಾಧ್ಯಕ್ಷರಾಗಿ ಹಾಗೂ ಕಳೆದ ಅವಧಿಯಲ್ಲಿ ಕೋಶಾಧಿಕಾರಿಯಾಗಿದ್ದ ಸುಂದರ್​ ಪ್ರಭು ಅವರನ್ನು ಗೌರವ ಸಲಹೆಗಾರರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಬ್ರಹ್ಮಣ್ಯ ಶೇರಿಗಾರ್​, ಕೆ.ಮುರಳೀಧರ ಆಚಾರ್​, ಪಾಂಡು ಎಂ. ಶೆಟ್ಟಿ, ರತ್ನಾಕರ ಜೆ. ಕಿಣಿ, ವಿಶ್ವನಾಥ ಯು., ವಾಸು ಆಚಾರ್​, ಸರಸ್ವತಿ, ಎಚ್​.ಶಕುಂತಲಾ ಹೆಗ್ಡೆ, ರಘುರಾಮ್​ ಶೆಟ್ಟಿ ನೇಮಕಗೊಂಡರು. ನಿವೃತ್ತ ತಹಸೀಲ್ದಾರ್​ ಕೆ.ಮುರಳೀಧರ ಆಚಾರ್ಯ ಚುನಾವಣಾಧಿಕಾರಿಯಾಗಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net