ಕಗ್ಗತ್ತಲಿನಲಿ ಮಂಗಳೂರಿನ ದಾರಿಮೇಲೆ ಕಂಡುಬಂದ 'ಭೂತ': ವಿಡಿಯೋ ವೈರಲ್​

bhoota
Published on

ಮಂಗಳೂರು: ಭೂತ, ದೆವ್ವ, ಪಿಶಾಚಿ, ಆತ್ಮಗಳು ಇವೆಯೋ, ಇಲ್ಲವೋ ಇನ್ನೂ ಸ್ಪಷ್ಟವಾಗಿಲ್ಲ. ಕೆಲವರು ತಾವು ಇದನ್ನು ನೋಡಿರುವುದಾಗಿ ಹೇಳುತ್ತಿದ್ದರೆ, ಮತ್ತೆ ಹಲವರು ಇವೆಲ್ಲಾ ಭ್ರಮೆಗಳು ಎನ್ನುತ್ತಾರೆ. ಇದು ಅವರವರ ಭಾವಕ್ಕೆ, ಅವರವರ ಅನುಭವಕ್ಕೆ ಬಿಟ್ಟ ವಿಷಯ.

ಕೆಲವೊಮ್ಮೆ ಭೂತ, ಆತ್ಮಗಳನ್ನು ನಂಬದವರು ಕೂಡ ಬೆಚ್ಚಿಬೀಳುವಂಥ ಘಟನೆಗಳು ನಡೆಯುವುದು ಉಂಟು. ನಮ್ಮ ಊಹೆಗೂ ನಿಲುಕದ, ಅದ್ಯಾವುದೋ ಶಕ್ತಿಯೊಂದು ನಮ್ಮ ಸುತ್ತಲೂ ಕೆಲಸ ಮಾಡುತ್ತಿದೆ ಎಂದೂ ಅನ್ನಿಸುವುದು ಉಂಟು.

ಹಲವಾರು ಸಂದರ್ಭಗಳಲ್ಲಿ ಅವ್ಯವಹಾರಗಳು, ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಜಾಗಗಳಿಗೆ ಜನರು ಬರಬಾರದು ಎನ್ನುವ ಕಾರಣಕ್ಕೆ ಭೂತ, ಪ್ರೇತಗಳ ಚೇಷ್ಠೆ ಮಾಡುವುದುಂಟು. ಇದು ಒಂದೆಡೆಯಾದರೆ, ಭೂತ- ದೆವ್ವಗಳ ಹೆಸರಿನಲ್ಲಿ ತಮಾಷೆಗಳೂ ಆಗುತ್ತವೆ. ಕೆಲವರು ಫೇಕ್​ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಅದೇನೇ ಇರಲಿ. ಇದೀಗ ಒಂದು 'ಭೂತದ' ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಮಂಗಳೂರಿನಲ್ಲಿ ನಡುರಾತ್ರಿಯಲಿ ಕಂಡುಬಂದಿರುವ ಭೂತ ಎಂದು ವೈರಲ್​ ಆಗಿದೆ. ವಿಡಿಯೋದಲ್ಲಿ ಇರುವ ದನಿ ತುಳುವಿನಲ್ಲಿ ಇರುವ ಕಾರಣ, ಇದು ಕರ್ನಾಟಕದ್ದೇ ಎನ್ನುವುದಂತೂ ದಿಟ.

ರಸ್ತೆಯ ಮೇಲೆ ಭೂತ ಹೋಗುತ್ತಿದ್ದು, ವಾಹನ ಸವಾರರು ಅದನ್ನು ನೋಡಿ ಬೆಚ್ಚಿಬಿದ್ದಿರುವುದಾಗಿ ಹೇಳಿ ಸುದ್ದಿಯಾಗುತ್ತಿದೆ. ಆದರೆ ಈ ವಿಡಿಯೋ ಸೂಕ್ಷ್ಮವಾಗಿ ಪರಿಶೀಲಿಸಿದರೆ ಯಾವುದೋ ವೃದ್ಧ ನಡೆದುಕೊಂಡು ಹೋಗುತ್ತಿರುವಂತೆ ಕಾಣಿಸುತ್ತಿದೆ. ಇದನ್ನು ಬೇಕೆಂತಲೇ ಸೃಷ್ಟಿ ಮಾಡಿದ್ದೋ ಅಥವಾ ವೃದ್ಧ ನಿಜವಾಗಿಯೂ ಹೋಗುತ್ತಿದ್ದಾಗ ವಿಡಿಯೋ ಮಾಡಿದ್ದೋ ಗೊತ್ತಿಲ್ಲ. ಒಟ್ಟಿನಲ್ಲಿ ನೋಡಿದರೆ ಭೂತ ಹೋದಂತೆ ಕಾಣುವುದು ಸುಳ್ಳಲ್ಲ.

ಈ ವಿಡಿಯೋ ನೋಡಿ ನಿಮಗೇನೆನ್ನಿಸುತ್ತದೆ... ಕಮೆಂಟ್​ ಮಾಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net