ಮೃತ ಗಂಡ ಬಂದು ಬ್ಯಾಂಕ್‌ನ ಹಣ ವಿತ್‌ಡ್ರಾ ಮಾಡಿದ! ಎಚ್.ಡಿ.ಕೋಟೆ ಬ್ಯಾಂಕ್‌ನಲ್ಲಿ ಇದೆಂಥ ದೋಖಾ

bank
ಆರೋಪಿ ಪ್ರೇಮ್ ಕುಮಾರ್, ವಂಚನೆಗೊಳಗಾದ ರೈತನ ಪತ್ನಿ
Published on

ಮೈಸೂರು: ಮೃತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ ಅಧಿಕಾರಿಗಳು 1.80 ಲಕ್ಷ ರೂ. ದೋಖಾ ಮಾಡಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಎಚ್‌.ಡಿ.ಕೋಟೆ ತಾಲೂಕಿನ ಎಂಡಿಸಿಸಿ ಬ್ಯಾಂಕ್‌ ಅಕೌಂಟ್‌ನಿಂದ ಹಣವನ್ನು ಡ್ರಾ ಮಾಡಿಕೊಂಡು ವಂಚನೆ ಮಾಡಿರುವ ಪ್ರಕರಣ ಇದಾಗಿದೆ.

ಕೃಷಿಕ ಚಿಕ್ಕಬೊಮ್ಮ ಸತ್ತು ನಾಲ್ಕೂವರೆ ತಿಂಗಳಾಗಿತ್ತು. ಆದರೆ ಅವರ ಹೆಸರಿನಲ್ಲಿ ಬ್ಯಾಂಕಿಗೆ ವಿತ್‌ಡ್ರಾ ಅರ್ಜಿ ಬಂದಿತ್ತು. ನಂತರ 1.80 ಲಕ್ಷ ರೂಪಾಯಿಗಳನ್ನು ವಿತ್‌ಡ್ರಾ ಮಾಡಲಾಗಿತ್ತು. ಪತಿ ಸತ್ತು ನಾಲ್ಕು ತಿಂಗಳ ಬಳಿಕ ಹಣ ವಿತ್‌ಡ್ರಾ ಆಗಿದ್ದನ್ನು ಕಂಡು ಅವರ ಪತ್ನಿ ಕಂಗಾಲಾಗಿ ಹೋಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಅವರು ದೂರು ದಾಖಲು ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಂತರ ದೂರು ದಾಖಲು ಮಾಡಿದಾಗ ಅಸಲಿಯತ್ತು ಬಹಿರಂಗಗೊಂಡಿದೆ. ಎಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರು ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪ್ರೇಮ್ ಕುಮಾರ್ ಈ ರೀತಿಯ ವಂಚನೆ ಮಾಡಿದ್ದು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದೊಣ್ಣೆಮಾದನ ಹಾಡಿಯ ಬೆಟ್ಟ ಕುರುಬ ಸಮುದಾಯದ ಚಿಕ್ಕಬೊಮ್ಮ ಕುಟುಂಬಕ್ಕೆ ವಂಚನೆಗೆ ಸಂಬಂಧಿಸಿದಂತೆ ಇವರ ವಿರುದ್ಧ ಈಗ ತನಿಖೆ ಶುರುವಾಗಿದೆ. ಎಚ್‌.ಡಿ.ಕೋಟೆ ತಾಲೂಕಿನ ಎಂಡಿಸಿಸಿ ಬ್ಯಾಂಕ್‌ ಅಕೌಂಟ್‌ನಿಂದ ಈ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲಾಗಿದೆ.

ಹೊಸಹಳ್ಳಿ ಸರ್ವೇ ನಂ. 48/157ರಲ್ಲಿ ಮೂರು ಎಕರೆ ಜಮೀನಿಗೆ ಸಂಬಂಧಿಸಿದಂತೆ ನಾಲ್ಕೂವರೆ ತಿಂಗಳ ಬಳಿಕ ಮೃತ ಆದಿವಾಸಿಯ ಹೆಸರಲ್ಲಿ ಹಣ ಡ್ರಾ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net