

ಮಂಡ್ಯ: 5 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿರುವ ಮಂಡ್ಯದ ಖ್ಯಾತ ವೈದ್ಯ ಡಾ.ಶಂಕರೇಗೌಡರಿಗೆ ಹೃದಯಾಘಾತವಾಗಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚರ್ಮ ರೋಗದ ತಜ್ಞರಾಗಿರುವ ಡಾ.ಶಂಕರೇಗೌಡ ಅವರು 5 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತಗೊಂಡಿದ್ದಾರೆ.
ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಶ್ರೀಸಾಮಾನ್ಯರ ಸೇವೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿರುವ ಇವರು ಶೀಘ್ರದಲ್ಲಿ ಗುಣಮುಖರಾಗಲೆಂದು ಎಲ್ಲರೂ ಹಾರೈಸುತ್ತಿದ್ದಾರೆ.
ಮಂಡ್ಯ ತಾಲೂಕಿನ ಶಿವಳ್ಳಿಯವರಾದ ಡಾ.ಶಂಕರೇಗೌಡ ಅವರು ತಮ್ಮ ಸರಳತೆಯಿಂದ ಜನರಿಗೆ ಹತ್ತಿರವಾಗಿದ್ದಾರೆ. ಮಂಡ್ಯದಲ್ಲಿ ದಲ್ತಾರಾ ಕ್ಲಿನಿಕ್ ಇಟ್ಟುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ತಮ್ಮ ಸೇವೆಗೆ ರೋಗಿಗಳಿಂದ ಪಡೆಯುವುದು ಕೇವಲ 5 ರೂಪಾಯಿ ಮಾತ್ರ. ಡಾ.ಶಂಕರೇಗೌಡ ಅವರು ಕೇವಲ ವೈದ್ಯರಲ್ಲ, ಬದಲಾಗಿ ಉತ್ತಮ ರೈತ, ಉತ್ತಮ ರಾಜಕಾರಣಿ ಕೂಡ. ಮಂಡ್ಯ ಜಿ.ಪಂಗೆ ಈ ಹಿಂದೆ ಸದಸ್ಯರಾಗಿ ಜನರ ಸೇವೆ ಮಾಡಿದ್ದಾರೆ.