VIDEO: ಹೊಸಪೇಟೆ ಬಳಿ ಇದ್ದಕ್ಕಿದ್ದಂತೆಯೇ ಧಗಧಗನೆ ಹೊತ್ತಿ ಉರಿದ ಲಾರಿ: ಆತಂಕದ ವಾತಾವರಣ

lorry
Published on

ವಿಜಯನಗರ: ಹೊಸಪೇಟೆ ತಾಲೂಕಿನ ವ್ಯಾಸನಕೆರೆ ಗ್ರಾಮದ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆಯೇ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಾರಿ ಧಗಧಗನೆ ಉರಿದು ಆತಂಕ ಸೃಷ್ಟಿಸಿತು.

ಶಾರ್ಟ್ ಸರ್ಕ್ಯೂಟ್ ಪರಿಣಾಮವಾಗಿ ಕಂಟೇನರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸಂಪೂರ್ಣ ಲಾರಿ ಭಸ್ಮವಾಗಿದೆ. ಚಂಡಿಗಢದಿಂದ ಬೆಂಗಳೂರಿಗೆ ಔಷಧಗಳನ್ನು ಇದರಲ್ಲಿ ಒಯ್ಯಲಾಗುತ್ತಿತ್ತು.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಚ್ಚರಿಕೆ ವಹಿಸಿದ ಚಾಲಕ ಅದರಿಂದ ಹೊರಬಂದು ಪಾರಾಗಿದ್ದಾನೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದರ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net