

ಯಾದಗಿರಿ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ ಯಾದಗಿರಿ ಜಿಲ್ಲೆಯ ಹುಣಸಗಿ ತಹಶಿಲ್ದಾರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂದಾಯ ಇಲಾಖೆ ನೌಕರ.
ಎಫ್‌ಡಿಎ ಗುರುಲಿಂಗಯ್ಯ ಬಲೆಗೆ ಬಿದ್ದವರು. ಪಹಣಿ ತೆಗೆಸುವ ವಿಚಾರಕ್ಕೆ ಗೌರಮ್ಮ ಎಂಬುವವರಿಗೆ 15 ಸಾವಿರ ಲಂಚ ನೀಡುವಂತೆ ಕೇಳಿ ಈಗ ಸಿಕ್ಕಿಬಿದ್ದಿದ್ದಾರೆ. 15 ಸಾವಿರ ರೂಪಾಯಿ ಪೈಕಿ 10 ಸಾವಿರ ಹಣ ಅಡ್ವಾನ್ಸ್ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಗುರುಲಿಂಗಯ್ಯ ಅವರನ್ನು ಯಾದಗಿರಿ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)