ಬೆಳಗಿನವರೆಗೂ ಸಮಯವಿದೆ, ಕಾದು ನೋಡಿ ಎಂದ ಮಾಜಿ ಸಿಎಂ ಎಚ್‌ಡಿಕೆ! ಏನಿದು ಮಾತಿನ ಮರ್ಮ?

HDK
Published on

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಇನ್ನು ಕಾಲಮಿಂಚಿಲ್ಲ. ಬೆಳಗಿನವರೆಗೂ ಸಮಯವಿದೆ, ಕಾದುನೋಡೋಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮಲ್ಲಿ ಅಡ್ಡ ಮತದಾನ ಸಾಧ್ಯವೇ ಇಲ್ಲ. ನಮ್ಮ ಎಲ್ಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ನವರು ಎರಡನೇ ಅಭ್ಯರ್ಥಿ ತರಾತುರಿ ಹಾಕಿದ್ದಾರೆ. ನಮ್ಮ ಜತೆ ಯಾರೂ ಚರ್ಚೆ ಮಾಡಿಲ್ಲ. ಈಗ ಬೆಂಬಲ ಕೊಡಿ ಎಂದರೆ ನಾವು ನಿಮ್ಮ ಅಡಿಯಾಳುಗಳಾ ಎಂದು ಪ್ರಶ್ನಿಸಿದರು.

ನಾವು ಅನ್ ಕಂಡಿಷನಲ್ ಆಗಿ ಸಿಎಂ‌ ಮಾಡಿಲ್ವಾ ಎನ್ನುತ್ತಾರೆ‌. 138 ರಿಂದ 78 ಕ್ಕೆ ಇಳಿದಿರಿ. ಹಾಗಾಗಿ ನೀವು ಆಫರ್ ಕೊಟ್ಟಿರಿ. ಆಗ ನಮಗೆ ಬಿಜೆಪಿಯಿಂದಲೂ ಆಫರ್ ಇತ್ತು. ನಮ್ಮನ್ನು ಬಿಜೆಪಿ ಬಿ ಟೀಮ್ ಎಂದು ಆರೋಪ‌ ಮಾಡಿ ಕಳೆದ ಚುನಾವಣೆಯಲ್ಲಿ ಸೋಲಿಸಿದಿರಿ. ನೀವೂ ಸೋತಿರಿ.

ನೀವೇ ನಮ್ಮ ಮನೆ ಬಾಗಿಲಿಗೆ ಬಂದಿರಿ. ನಾವು ಅರ್ಜಿ ಹಾಕಿಕೊಂಡು ಬಂದದ್ದಲ್ಲ. ನಮಗೆ 24 ಕ್ಯಾಬಿನೆಟ್ ಸ್ಥಾನ ಬೇಕು ಎಂದು ಒತ್ತಡ ಹಾಕಿದಿರಿ. ಇಂಥ ಇಲಾಖೆಗಳೇ ಬೇಕು ಎಂದು ತೆಗೆದುಕೊಂಡಿರಿ. ಡಿಪಿಆರ್ ನಲ್ಲಿ ನಾನು ಯಾವ ತೀರ್ಮಾನ ತೆಗೆದುಕೊಳ್ಳಲು ಆಗಲಿಲ್ಲ. ನೀವು ಕೊಟ್ಟ ಎಲ್ಲ ಹಿಂಸೆ ಸಹಿಸಿಕೊಂಡದ್ದು, ರೈತರ ಸಾಲ ಮನ್ನಾ ಮಾಡಲು. ರೈತರಿಗೋಸ್ಕರ ನಾನು ಸರ್ಕಾರ ಮಾಡಿದೆ.

|

ಬಿಜೆಪಿ ಲೂಟಿ ಆಡಳಿತ ಎಂದು ಈಗ ಪ್ರತಿಭಟನೆ ಮಾಡುತ್ತಿದ್ಧಿರಲ್ಲ. ನೀವು ಒಂದು ಸಮಾಜ(ಲಿಂಗಾಯತ-ವೀರಶೈವ) ಒಡೆಯಲು ಹೋಗಿ ಸೋತು ಸುಣ್ಣವಾದಿರಲ್ಲ. 2016 ಚುನಾವಣೆ ನಮ್ಮಿಂದ ಹೈಜಾಕ್ ಮಾಡಿ 8 ಜನರಿಂದ ಅಲ್ಪಸಂಖ್ಯಾತ ಅಭ್ಯರ್ಥಿ ಸೋಲಿಸಿದ್ದು ಯಾರು? ಎಂದು ಕಾಂಗ್ರೆಸ್ ನಾಯಕರನ್ನು ಕೆಣಕಿದರು.

ನಾವು ತಪ್ಪು ಮಾಡಿಲ್ಲ:

ನಾವು ತಪ್ಪು ಮಾಡಿಲ್ಲ. ಕೋಮು ಶಕ್ತಿ ತಲೆ ಎತ್ತಲು ನಾನು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಹಿತಕರ ಘಟನೆಗೆ ಅವಕಾಶ ಕೊಟ್ಟಿಲ್ಲ. ಈಗ ಸೆಕ್ಯಲರ್ ಫೋಸ್೯ ಉಳಿಸಬೇಕು ಎನ್ನುತ್ತೀರಿ. ನೀವು ದೃವೇಗೌಡರನ್ನು ಸಿಎಂ ಮಾಡಿದ್ದಾ? ನಾವು ನಿಮ್ಮ ಪಕ್ಷದ ಧರಂ ಸಿಂಗ್ ಅವರನ್ನು ಸಿಎಂ ಮಾಡಲಿಲ್ವಾ? ನನ್ನ ಸಿಎಂ ಮಾಡಲಿಲ್ಲ ಎಂದು ಅಹಿಂದ ಸಮಾವೇಶ ಮಾಡಿಕೊಂಡು ಹೋಗಲಿಲ್ಲವೆ ನೀವು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಈಗ ನಿಮ್ಮನ್ನು ನಾವು ಗೆಲ್ಲಿಸುವ ಸ್ಥಿತಿಯಲ್ಲಿ ಇಲ್ಲ. ಆತ್ಮ ಸಾಕ್ಷಿ ಎಂದರೇನು? ವ್ಯಾಪಾರ ಮಾಡಲು ನಮ್ಮ ಶಾಸಕರನ್ನು ಸಂಪರ್ಕ ಮಾಡುತ್ತಾರಾ? ಕಾಂಗ್ರೆಸ್ ನಲ್ಲಿ ಸ್ಥಾನ ಸಿಗಲ್ಲ ಎಂದು ಬಿಜೆಪಿಗೂ ಒಂದು ಕಾಲದಲ್ಲಿ ಟವಲ್ ಹಾಕಿದ್ದವರು ನೀವು ಎಂದು ಹರಿಹಾಯ್ದರು.

ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಮೊದಲೇ ನಮ್ಮ ಜತೆ ಚರ್ಚೆ ಮಾಡಿದ್ದರೆ ಇಷ್ಟೆಲ್ಲ ಗೊಂದಲ ಏಕಾಗುತ್ತಿತ್ತು? ಎಂದು ಕೇಳಿದರು.

ಆತೃಪ್ತರ ಮನವೊಲಿಕೆ:

ನಮ್ಮ ಶಾಸಕರು ಅವರ ಶಾಸಕರ ಜತೆಯೂ ಮಾತನಾಡಿದ್ದಾರೆ. ಶಿವಲಿಂಗೇಗೌಡ ಜತೆ ನಾನೇ mAತನಾಡಿದ್ದೇನೆ. ಶ್ರೀನಿವಾಸಗೌಡರ ಮನವೊಲಿಸುವ ಕೆಲಸವನ್ನು ಗೋವಿಂದರಾಜು ಮಾಡಿದ್ದಾರೆ. ಗುಬ್ಬಿ ಶ್ರೀನಿವಾಸ್ ನಮ್ಮ ಸಂಪರ್ಕದಲ್ಲಿದ್ದಾರೆ. ಜಿಟಿಡಿ ವೋಟ್ ಹಾಕುವುದಾಗಿ ಹೇಳಿದ್ದಾರೆ.

ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ:

ಜನಕ್ಕೆ ಒಂದು ಸಂದೇಶ ಕೊಡಲು ನಮ್ಮನ್ನು ಗೆಲ್ಲಿಸಬೇಕು. ನಮ್ಮ ಶಾಸಕರು ಈ ಚುನಾವಣೆಯಲ್ಲಿ ನಮ್ಮ ಜತೆಯೇ ಇದ್ದಾರೆ. ಅಡ್ಡ ಮತದಾನ ಹೇಗಾಗುತ್ತದೆ? ಎಂದು ಪ್ರಶ್ನಿಸಿದರು. ಮುಂದೆ ನಮ್ಮಅತೃಪ್ತ ಶಾಸಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅವರಿಗೆ ಬಿಟ್ಟದ್ದು. ನಾನು ಕೂಡ ಕಾಂಗ್ರೆಸ್ ನ ಕೆಲವು ಆತ್ಮೀಯ ಶಾಸಕರಿಗೆ ದ್ವಿತೀಯ ಪ್ರಾಶಸ್ತ್ಯ ಮತ ಕೊಡುವಂತೆ ಕೇಳಿದ್ದೇನೆ. ಕದ್ದುಮುಚ್ಚಿ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸೂಟ್ ಕೇಸ್ ಮಾಹಿತಿ ಇಲ್ಲ!:

ಸೂಟ್ ಕೇಸ್ ಮಾಹಿತಿ ನಮಗೆ ಈ ಚುನಾವಣೆಯಲ್ಲಿ ಬಂದಿಲ್ಲ. ಎರಡೂ ಸೈಡ್ ನಿಂದ ಬಂದರೆ ಒಲವು ಬಂದರೆ ಮಾತನಾಡಬಹುದು. ಅವರದ್ದು(ಕಾಂಗ್ರೆಸ್) ಜೆಡಿಎಸ್ ಮುಗಿಸುವುದು ಅಜಂಡಾ ಆಗಿದೆ. ನಾವು ಯಾವುದೇ ಕಂಡೀಷನ್ ಇಲ್ಲ. ಸುರ್ಜೇವಾಲ ಜತೆ ಮಾತನಾಡಿದ್ದೇನೆ. ದ್ವಿತೀಯ ಪ್ರಾಶಸ್ತ್ಯ ಮತ ಅವರಿಗೆ ಉಪಯೋಗ ಬರಲ್ಲ. ನಮಗೆ ನೀವು ನಮಗೆ ನೀವು ದ್ವಿತೀಯ ಪ್ರಾಶಸ್ತ್ಯ ಮತ ಕೊಡಿ ಎಂದು ಕೇಳಿದ್ದೇನೆ. ನನ್ನ ಜತೆ ಡಿಕೆಶಿಯೇ ಮಾತನಾಡಿದ್ದಾರೆ. ಇನ್ನೂ ಒಂದುಬದಿನ ಇದೆ ಏನಾಗುತ್ತದೆಯೋ ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net