

ಧಾರವಾಡ: ಧಾರವಾಡ ಆಕಾಶವಾಣಿ ಸಿಬ್ಬಂದಿ ಇರುವ ವಸತಿ ಗೃಹಗಳಿಗೆ ಯಾರೋ ದುಷ್ಕರ್ಮಿಗಳು ಬೀಗ ಹಾಕಿರುವ ಘಟನೆ ನಡೆದಿದೆ.
ಧಾರವಾಡ ಕೆಸಿಡಿ ಬಳಿ ಇರುವ ವಸತಿ ಗೃಹಗಳಲ್ಲಿ ಈ ಘಟನೆ ಸಂಭವಿಸಿದೆ. ಹೊರಗಡೆಯಿಂದ ದುಷ್ಕರ್ಮಿಗಳು ಬೀಗ ಹಾಕಿ ಹೋಗಿದ್ದು ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಪ್ರದೇಶದಲ್ಲಿ ಇರುವ 10ಕ್ಕೂ ಹೆಚ್ಚು ಮನೆಗಳಿಗೆ ಹೊರಗಡೆಯಿಂದ ಬೀಗ ಹಾಕಲಾಗಿದೆ. ಕೆಲಮಹಡಿಯ ಮನೆಗಳಿಗೆ ಮಾತ್ರ ಈ ರೀತಿಮಾಡಲಾಗಿದೆ. ಸಾಲದು ಎಂಬುದಕ್ಕೆ ಮೇಲ್ಮಹಡಿಗೆ ಹೋಗದಂತೆಯೂ ಮೆಟ್ಟಿಲಿನ ಬಾಗಿಲಿಗೂ ಬೀಗ ಹಾಕಲಾಗಿದೆ.
ಇದರಿಂದ ಆಕಾಶವಾಣಿ ಸಿಬ್ಬಂದಿ ಸೇರಿದಂತೆ ಇಲ್ಲಿ ವಾಸಿಸುತ್ತಿರುವವರೆಲ್ಲರೂ ಒಳಗಡೆಯೆ ಲಾಕ್ ಆಗಿದ್ದಾರೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿರೋ ಶಂಕೆ ಉಂಟಾಗಿದೆ. ಏಕೆಂದರೆ ಬೆಳಗ್ಗೆ 4ಕ್ಕೆ ಏಕಾಏಕಿ ವಿದ್ಯುತ್ ಕಡಿತ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದುರ್ಷರ್ಮಿಗಳು ಹೀಗೆ ಮಾಡಿರಬಹುದು ಎಂದು ಊಹಿಸಲಾಗಿದೆ. ಇದೀಗ ಬೇರೆಯವರನ್ನು ಕರೆಯಿಸಿ ಬೀಗ ತೆರೆಸಲಾಗುತ್ತಿದೆ.
ಅದರ ವಿಡಿಯೋಗಳು ಇಲ್ಲಿವೆ ನೋಡಿ...