ಎಸ್.ಡಿ.ಪ್ರೇಮಾವತಿ ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷೆ

8KDR2
ಕಡೂರಿನ ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಎಸ್.ಡಿ.ಪ್ರೇಮಾವತಿ ಕೇಶವ್ ಅವರನ್ನು ಗ್ರಾಪಂ ಸದಸ್ಯರು ಅಭಿನಂದಿಸಿದರು.
Published on

ಕಡೂರು: ತಾಲೂಕಿನ ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷೆಯಾಗಿ ಎಸ್.ಡಿ.ಪ್ರೇಮಾವತಿ ಕೇಶವ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದಿನ ಅಧ್ಯಕ್ಷ ಸೈಯದ್ ಸಲೀಂ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಗ್ರಾಪಂ ಕಚೇರಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷೆ ಪ್ರೇಮಾವತಿ ಕೇಶವ್ ಮಾತನಾಡಿ, ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಲಾಗುತ್ತದೆ. ಅಗತ್ಯ ಮೂಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಪುಷ್ಪಲತಾ ಸೋಮೇಶ್, ಸದಸ್ಯರಾದ ಶ್ರೀನಿವಾಸ್, ನವೀನ್, ಚೈತ್ರಾ, ದೀಪಾ, ಮಂಜುಶ್ರೀ, ಯಳಗೊಂಡನಹಳ್ಳಿ ಈಶ್ವರಪ್ಪ, ಸೋಮೇಶ್, ಮುಖಂಡರಾದ ನಾಗರಾಜ್, ತಿಮ್ಮಯ್ಯ, ಮುದಿಯಪ್ಪ, ಶೇಖರ್, ವೈ.ಡಿ.ನಾಗಣ್ಣ, ರುದ್ರಯ್ಯ, ಸಿ.ಸಿ. ದೇವರಾಜ್, ಅಯೂಬ್‌ಖಾನ್, ಮಿಲ್ಟ್ರಿ ರಮೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net