ಬೆಡ್‌ಗಾಗಿ ಕಾದೂ ಕಾದೂ ಆಸ್ಪತ್ರೆ ಎದುರೇ ಪ್ರಾಣ ಬಿಟ್ಟ ಸೋಂಕಿತ- ಕುಳಿತಲ್ಲೇ ಬಂದೆರಗಿದ ಸಾವು!

death
Published on

ಆನೇಕಲ್‌: ಕರೊನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಸಾಗಿದೆ. ಆನೇಕಲ್ ತಾಲ್ಲೂಕಿನ ಹಾಲ್ದೇನಹಳ್ಳಿ ನಿವಾಸಿ ನಾಗೇಶ್ ಎನ್ನುವವರು ಕರೊನಾದ ವರದಿ ಬರುವುದಕ್ಕಾಗಿ ಕಾದೂ ಕಾದೂ ಆಸ್ಪತ್ರೆಯಲ್ಲಿಯೇ ಪ್ರಾಣ ಬಿಟ್ಟ ಆತಂಕದ ಘಟನೆ ನಡೆದಿದೆ.

ಜ್ವರದಿಂದ ಬಳಲುತ್ತಿದ್ದ ನಾಗೇಶ್‌ ಅವರಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆದರೆ ವರದಿ ಬರುವುದು ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬೆಡ್ ಸಿಗಲಿಲ್ಲ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಯ ಎದುರು ಕಾಯ್ದು ಕಾಯ್ದು ನಂತರ ಕುಳಿತಲ್ಲಿಯೇ ಬಿದ್ದು ನಾಗೇಶ್‌ ಮೃತಪಟ್ಟಿದ್ದಾರೆ.

ಸೋಂಕಿತ ವ್ಯಕ್ತಿಯನ್ನು ಹಾಲ್ದೇನಹಳ್ಳಿ ಕೆರೆಗೆ ಬಳಿ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಲಾಗಿದೆ. ಗ್ರಾಮ ಪಂಚಾಯತಿ ಸದಸ್ಯ ತಿಮ್ಮರಾಜು ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇವರ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net