VIDEO: ಮುಖ್ಯಮಂತ್ರಿ ಬೊಮ್ಮಾಯಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಅಜ್ಜಿಯ ದೌಡು

bommai
Published on

ಬೆಂಗಳೂರು; ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದ ಪ್ರವೇಶ ದ್ವಾರದ ಬಳಿ ನಿಂತಿದ್ದ ಅಜ್ಜಿಯೊಬ್ಬರನ್ನು ನೋಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಮ್ಮ ವಾಹನದಿಂದ ಕೆಳಗೆ ಇಳಿದು ಅಜ್ಜಿಯ ಮೊರೆ ಆಲಿಸಿದ ಪ್ರಸಂಗ ಶುಕ್ರವಾರ ನಡೆಯಿತು.

ಮೂಲತಃ ಆಂಧ್ರದ ಕರ್ನೂಲು ನಿವಾಸಿಯಾದ ಅಜ್ಜಿ ಗಂಡನೊಂದಿಗೆ ಕಳೆದ 10, ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ವೃದ್ಧಾಪ್ಯ ಮಾಸಾಶನ ಮಂಜೂರಾಗಿಲ್ಲ. ಈಗ ಗಂಡನಿಗೆ ಹುಷಾರಿಲ್ಲ, ವೈದ್ಯರಿಗೆ ತೋರಿಸಲು ಹಣವಿಲ್ಲ. ಸ್ವಂತ ಊರಿಗೆ ಮರಳಬೇಕೆಂದಿದ್ದೇವೆ. ಹಣದ ಸಹಾಯ ಕೇಳಲು ಬಂದಿರುವೆ ಎಂದಾಗ ಅಧಿಕಾರಿಗಳಿಗೆ‌ ಹೇಳಿ ನೆರವು ಕೊಡಿಸುವೆ ಎಂದು ಬೊಮ್ಮಾಯಿ‌ ಭರವಸೆ ನೀಡಿದರು.

ನಂತರ ಹುಬ್ಬಳ್ಳಿಯಿಂದ ಆಗಮಿಸಿದ್ದ ಕಾರ್ಯಕರ್ತರನ್ನು ಕಂಡು ಅವರ ಬಳಿಗೆ ಹೂಗುಚ್ಛ‌ ಸ್ವೀಕರಿಸಿ ಧನ್ಯವಾದ ತಿಳಿಸಿದರು. ಬೊಮ್ಮಾಯಿ‌ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಕಚೇರಿಯೊಳಗೆ ಹೋದ ನಂತರವೂ ಅಹವಾಲು ಸಲ್ಲಿಸುವವರು,‌ಹೂಗುಚ್ಛ ಹಿಡಿದವರು ಸಾಲುಗಟ್ಟಿ ನಿಂತಿದ್ಸರು.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net