VIDEO: ಮಕ್ಕಳ ದಿನಕ್ಕೆ ಪುನೀತ್‌ ಶುಭಾಶಯ: ವಿಡಿಯೋ ನೋಡಿ ಕಣ್ಣೀರಾಗ್ತಿದ್ದಾರೆ ಅಭಿಮಾನಿಗಳು

puneeth Rajkumar vvani
Published on

ಬೆಂಗಳೂರು: ಮಕ್ಕಳನ್ನು ಸದಾ ಪ್ರೀತಿಸುತ್ತಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಇನ್ನಿಲ್ಲದಿದ್ದರೂ, ಅವರ ನೆನಪು ಸದಾ ಸ್ಮರಣೀಯ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಅವರ ವಿಡಿಯೋ ಒಂದು ಭಾರಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳನ್ನು ಅದರಲ್ಲಿಯೂ ಹೆಚ್ಚಾಗಿ ಅವರ ಪುಟಾಣಿ ಅಭಿಮಾನಿಗಳಿಗೆ ಕಣ್ಣೀರು ತರಿಸುತ್ತಿದೆ.

ಇಂದು ಮಕ್ಕಳ ದಿನಾಚರಣೆ. ಕಳೆದ ವರ್ಷ ಮಕ್ಕಳ ದಿನದಂದು ಪುನೀತ್‌ ಅವರು ಮಕ್ಕಳಿಗೆ ಶುಭಾಶಯ ಕೋರಿದ್ದರು. ಕಳೆದ ವರ್ಷದ ದೀಪಾವಳಿಗೆ ಶುಭ ಕೋರಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಇದೀಗ ಮಕ್ಕಳ ದಿನಾಚರಣೆಗೆ ಶುಭ ಕೋರಿರುವ ವಿಡಿಯೋ ಕೂಡ ವೈರಲ್‌ ಆಗುತ್ತಿದೆ.

ಪುನೀತ್‌ ಅವರ ಅಭಿನಯ ಹಾಗೂ ಅವರ ಪ್ರೀತಿ-ಕಾಳಜಿಗೆ ದೊಡ್ಡವರು ಮಾತ್ರವಲ್ಲದೇ ಅವರು ಅಸಂಖ್ಯ ಮಕ್ಕಳ ಅಭಿಮಾನವನ್ನೂ ಗಳಿಸಿದ್ದಾರೆ. ಆದ್ದರಿಂದ ಅವರು ನಿಧನರಾದ ಸುದ್ದಿ ಕೇಳುತ್ತಿದ್ದಂತೆಯೇ ಎಷ್ಟೋ ಮಕ್ಕಳು ಕೂಡ ಕಣ್ಣೀರು ಸುರಿಸಿದ್ದರು. ಇದೀಗ ಮಕ್ಕಳ ದಿನದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದೆ.

ಪುನೀತ್‌ ಫ್ಯಾನ್ಸ್‌ಕ್ಲಬ್‌ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net