ಮೈದುಂಬಿದ ಕೆರೆ ನೋಡಿ ಈಜಲು ಹೋದ 3 ಬಾಲಕರ ದುರ್ಮರಣ: ಸಾವಿನಲ್ಲೂ ಒಂದಾದ ಅವಳಿ ಮಕ್ಕಳು!

ckb
Published on

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ದಾರುಣವಾಗಿ ಮೃತಪಟ್ಟಿರುವ ಘಟನೆ .ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದಲ್ಲಿ ನಡೆದಿದೆ. ಧಾರಾಕಾರ ಮಳೆಯಿಂದ 30 ವರ್ಷಗಳ ನಂತರ ಗ್ರಾಮದ ಕೆರೆ ಕೋಡಿ ಹರಿದಿತ್ತು. ಇದನ್ನು ನೋಡಲು ಹೋದ ಬಾಲಕರಿಗೆ ಈಜುವ ಆಸೆಯಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಕೋಡೇಗಂಡ್ಲು ಗ್ರಾಮದ ವೆಂಕಟೇಶ್- ಗಾಯತ್ರಿ ದಂಪತಿ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿ ಪ್ರಜ್ವಲ್ (9) ಮೃತಪಟ್ಟವರು. ಇವರೆಲ್ಲರೂ ಕೋಡೆಗಂಡ್ಲು ಗ್ರಾಮದ ನಿವಾಸಿಗಳು.
ಸಂಜೆ ಶಾಲೆ ಮುಗಿದ ಮೇಲೆ ಕೆರೆ ನೋಡಲು ಹೋಗಿದ್ದ ಬಾಲಕರು ದುರಂತ ಸಾವು ಕಂಡಿದ್ದಾರೆ.

ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net