

ಮೈಸೂರು: ಇಂದು ಆಶಾಢ ಶುಕ್ರವಾರ. ಈ ದಿನ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಅದೇ ರೀತಿ ಪ್ರತಿ ವರ್ಷವೂ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ, ಪುನಸ್ಕಾರ, ರುದ್ರಾಭಿಷೇಕ, ಕುಂಕುಮಾಭಿಷೇಕ ಮಾಡಿ ವಿಶೇಷ ಅಲಂಕಾರಗಳು ನಡೆಯುತ್ತವೆ. ಈ ಪೂಜೆಯನ್ನು ಕಣ್ತುಂಬಿಸಿಕೊಳ್ಳಲು ವಿವಿಧ ಊರುಗಳಿಂದ ಜನರು ಆಗಮಿಸುತ್ತಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸರಳ ಆಚರಣೆ. ಮಾಡಲಾಗಿದೆ. ಸೋಂಕಿನ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ನಿರ್ಬಂಧ ವಿಧಿಸಲಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಎಲ್ಲ ಗೇಟ್‌ಗಳೂ ಕ್ಲೋಸ್ ಆಗಿವೆ.
ಆದರೆ ಇದನ್ನು ಲೆಕ್ಕಿಸದೇ ಹಲವಾರು ಭಕ್ತರು ಅಮ್ಮನ ದರ್ಶನಕ್ಕೆ ಬರುತ್ತಿದ್ದಾರೆ. ಅಮ್ಮನ ದರ್ಶನ ಭಾಗ್ಯ ಸಿಗದಿದ್ದರೇನು? ದೇವಾಲಯದ ಹಾದಿಯಲ್ಲಿಯೇ ಪೂಜೆ, ಪುನಸ್ಕಾರಗಳನ್ನು ನೆರವೇರಿಸುತ್ತಿದ್ದಾರೆ. ಚಾಮುಂಡಿಯ ದರ್ಶನಕ್ಕೆ ಬಂದಿದ್ದ ವೃದ್ಧೆಯೊಬ್ಬರು ಪೊಲೀಸ್ ಬ್ಯಾರಿಕೇಡ್‌ಗೆ ಪೂಜೆ ಸಲ್ಲಿಸಿದ್ದಾರೆ. ಆಷಾಢ ಶುಕ್ರವಾರದ ಪೂಜೆಗಾಗಿ ತಂದಿದ್ದ ಹಣ್ಣು, ಕಾಯಿ, ಅರಿಶಿನ, ಕುಂಕುಮ, ಕರ್ಪೂರವನ್ನು . ಮಾರ್ಗದಲ್ಲಿಯೇ ಹಚ್ಚಿದ್ದಾರೆ.
ಮೆಟ್ಟಿಲು ಮಾರ್ಗದಲ್ಲಿರುವ ಪಾದಕ್ಕೆ ಪೂಜೆ ಸಲ್ಲಿಸಲು ಪೊಲೀಸರಿಗೆ ಅವರು ಮಾಡಿಕೊಂಡ ಮನವಿಯನ್ನು ಪೊಲೀಸರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಪೂಜೆ ಮಾಡಿದ್ದಾರೆ.