ಚಾಮರಾಜನಗರದ ದರ್ಗಾದಲ್ಲಿ ನಡೆದ ಕೊಲೆ ಹಿಂದಿರೋದು ಮಹಿಳೆ! ರಹಸ್ಯ ಭೇದಿಸಿದ ಪೊಲೀಸರು

chamrajnagar
Published on

ಚಾಮರಾಜನಗರ: ಕೆಲ ದಿನಗಳ ಹಿಂದೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿಯ ದರ್ಗಾದ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಶವ ಯಾರದ್ದು ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಈ ಕೊಲೆ ರಹಸ್ಯವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ.

ಬೇರೊಬ್ಬನ‌ ಹೆಂಡ್ತಿ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಕಾರಣ ಆಟೋ ಚಾಲಕನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ರಾಮನಗರ ಮೂಲದ ಸೈಯದ್ ಮುಜಾಯಿದ್ ಅಲಿಯಾಸ್​ ಬರ್ನಿಂಗ್ ಬಾಬಾ ಕೊಲೆಯಾದ ವ್ಯಕ್ತಿ. ಈತ ರಾಮನಗರದ ಸೈಯದ್ ಸಿಕಂದರ್ ಪತ್ನಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದರ್ಗಾದ ಬಳಿ ಕೊಲೆ ಮಾಡಲಾಗಿತ್ತು. ತಲೆ ಮೇಲೆ ಕಲ್ಲು ಎತ್ತಿ ಹಾಕಿ‌ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಸಿಕಂದರ್, ಮುಸಾವೀರ್, ಶೌಕತ್ ಅಲಿ,ಹಬೀಬ್ ವುಲ್ಲಾ, ಸೈಯದ್ ಸಲೀಂ ಬಂಧಿತ ಆರೋಪಿಗಳು. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net