ಮಕ್ಕಳಿಗೆ ಸೈಕಲ್, ಪುಸ್ತಕ, ಬಟ್ಟೆ ಕೊಡ್ತೀವಿ, ಶಾಲೆಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡ್ತೀವಿ: ಸಿಎಂ ಭರವಸೆ

bommai
Published on

ಬೆಂಗಳೂರು: ಮಕ್ಕಳಿಗೆ ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ಎಲ್ಲವನ್ನೂ ಕೊಡ್ತೀವಿ. ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡ್ತೀವಿ. ಎಲ್ಲ ಶಾಲೆಗಳ ಪರವಾಗಿ ಮಕ್ಕಳನ್ನು ಸ್ವಾಗತಿಸುತ್ತೇನೆ.

ಹೀಗೆಂದವರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌. ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ ಪ್ರವಾಸಕ್ಕೆ ಸೋಮವಾರ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಪುನಾರಂಭವಾಗಿವೆ. ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದ್ದು, ಶಾಲೆಗಳಲ್ಲಿ ಕಲಿಕೆ ಉತ್ತಮ ಪರಿಣಾಮಬೀರುತ್ತದೆ. ಕರೊನಾ ಕಾರಣಕ್ಕೆ ಹಿಂದಿನ ಎರಡು ಶೈಕ್ಷಣಿಕ ವರ್ಷಗಳು ಅನುಭವಿಸಿದ ಅನಿಶ್ಚಿತತೆ ದೂರವಾಗಿರುವುದು ಸಮಾಧಾನಕರ ಎಂದು ಬೊಮ್ಮಾಯಿ‌ ಸಂತಸ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಮೂಲ ಸವಲತ್ತು ಅಭಿವೃದ್ಧಿ, ಹೊಸ ಕೊಠಡಿ, ಕಟ್ಟಡಗಳ ನಿರ್ಮಾಣ, ದುರಸ್ತಿಯಿಂದ ಹಿಡಿದು ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ಎಲ್ಲವನ್ನೂ ಪೂರೈಸುವುದಕ್ಕೆ ಸರ್ಕಾರ ಬದ್ಧವಾಗಿದೆ.

ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಮಕ್ಕಳ ಕಲಿಕೆ ಸುಸೂತ್ರವಾಗಿ ಸಾಗುವಂತೆ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net