

ವಿಜಯನಗರ: ಬಿಜೆಪಿಯಿಂದ ನನಗೂ ಆಫರ್ ಬಂದಿತ್ತು ಎನ್ನುವ ಮೂಲಕ ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಬಾಂಬ್ ಸ್ಫೋಟಿಸಿದ್ದಾರೆ.
ಯಡಿಯೂರಪ್ಪ ಸರ್ಕಾರ ರಚೆನೆಯಾಗೋ ಸಂರ್ಧಭದಲ್ಲಿ ನನಗೂ ಕರೆ ಬಂದಿತ್ತು. ಬಿಜೆಪಿಗೆ ಬರುವಂತೆ ಆಫರ್ ಬಂದಿತ್ತು. ಒಂದು ವೇಳೆ ಅಲ್ಲಿಗೆ ಹೋಗಿದ್ದರೆ ಇಷ್ಟೊತ್ತಿಗಾಗದೇ ನಾನು ಕೂಡ ಸಚಿವನಾಗುತ್ತಿದೆ. ಆದರೆ ನಾನು ಹಾಗೆ ಮಾಡಲಿಲ್ಲ. ಸಿದ್ದರಾಮಯ್ಯ ಅವರ ಮುಖ ನೋಡ್ಕೊಂಡು ನಾನು ಇಲ್ಲೆ ಉಳಿದುಕೊಂಡೆ ಎಂದಿದ್ದಾರೆ.
ಬಿಜೆಪಿ ಸರ್ಕಾರದ ರಚನೆ ವೇಳೆ ಸಾಕಷ್ಟು ಬಾರಿ ನನಗೆ ಕರೆ ಮಾಡಿದ್ದರು. ಬಂದರೆ ಮಂತ್ರಿ ಮಾಡುವುದಾಗಿಯೂ ಹೇಳಿದ್ದರು. ಆದರೆ ನಮ್ಮ ಲೀಡರ್ ಸಿದ್ದರಾಮಯ್ಯ ಅವರ ಮುಖ ನೊಡ್ಕೊಂಡು ಪಕ್ಷದಲ್ಲಿಯೆ ಉಳಿದೆ. ಸಿದ್ದರಾಮಯ್ಯ ಅವರಿಗೆ ಮೋಸ ಮಾಡೋ ಮನಸ್ಸು ನನಗೆ ಬರಲಿಲ್ಲ. ಏಕೆಂದರೆ 2013- 2018ರ ವರೆಗೆ ಜೆಡಿಎಸ್ ಶಾಸಕನಾಗಿದ್ದರೂಸಿ ದ್ದರಾಮಯ್ಯ ಕೇಳಿದಷ್ಟು ಅನುದಾನ ಕೊಟ್ಟಿದ್ದರು. ನನ್ನನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದೇ ಸಿದ್ದರಾಮಯ್ಯ.. ಹಾಗಾಗಿ ಬೇರೆಯವರು ಪಕ್ಷ ತೊರೆದರೂ ನನಗೆ ನನಗೆ ಹೋಗೋ ಮನಸ್ಸಾಗಲಿಲ್ಲ ಎಂದರು.
ಈ ಬಗ್ಗೆ ಕುಟುಂಬದ ಸದಸ್ಯರ ಜೊತೆಗೆ ಸಾಕಷ್ಟು ಚರ್ಚೆ ಮಾಡಿದ್ದೆ. ಆದರೆ ಬಿಜೆಪಿ ಹೋಗೋದು ಬೇಡ ಎಂದೇ ಎಲ್ಲರೂ ಹೇಳಿದ್ದರಿಂದ ಉಳಿದುಕೊಂಡೆ ಎಂದಿದ್ದಾರೆ ಭೀಮಾನಾಯ್ಕ್.