ಇಂದು ಅನಂತ್​ ಕುಮಾರ್​ ಹುಟ್ಟುಹಬ್ಬ: ಮಾಜಿ ಸಚಿವರ ಸ್ಮರಣಾರ್ಥ ಸರ್ಕಾರದಿಂದ ಜಮೀನು ಗಿಫ್ಟ್​

ananthkumar
Published on

ಬೆಂಗಳೂರು: ಕೇಂದ್ರದ ಮಾಜಿ ಸಚಿವರಾಗಿದ್ದ ಅನಂತ್ ಕುಮಾರ್ ಅವರ ಹುಟ್ಟುಹಬ್ಬ ಇಂದು. 2018ರ ನವೆಂಬರ್​ 12ರಂದು ನಿಧನರಾದ ಅನಂತ್​ ಕುಮಾರ್​ ಅವರ ಸ್ಮರಣಾರ್ಥ ಅವರಿಗೆ ಹುಟ್ಟುಹಬ್ಬದ ಕೊಡುಗೆಯಾಗಿ ರಾಜ್ಯ ಸರ್ಕಾರ ಉಡುಗೊರೆಯೊಂದನ್ನು ನೀಡಿದೆ.

ಇಂದು ನಡೆಯುತ್ತಿರುವ ಸಚಿವ ಸಂಪುಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. 1959ರ ಜುಲೈ 22ರಂದು ಹುಟ್ಟಿದ್ದ ಅನಂತ್​ಕುಮಾರ್​ ಅವರು ಬದುಕಿದ್ದರೆ ಇಂದು ಅವರು ಇಂದು 53 ವರ್ಷ ಪೂರೈಸುತ್ತಿದ್ದರು. ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿರುವ ರಾಜ್ಯ ಸರ್ಕಾರ ಅವರಿಗೆ ಜಮೀನನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಖರಾಬು ಭೂಮಿ ‌ನೀಡಲು ಸಮ್ಮತಿ ನೀಡಲಾಗಿದೆ. ಈ ಜಮೀನನ್ನು ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಮಂಜೂರು ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಒಟ್ಟು 3.10 ಎಕರೆ ಜಮೀನು ಮಂಜೂರು ಮಾಡಲು ತೀರ್ಮಾನಿಸಲಾಗಿದ್ದು, ಇಲ್ಲಿ ಹಸಿರು ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದಿದೆ ಸರ್ಕಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net